ಇಲಕಲ್ಲ: ಇಂದು ದೇಶದಲ್ಲಿ ಮನುಜರು ಮಾನವೀಯತೆಯ ಮೌಲ್ಯಗಳನ್ನು ಮರೆತಿರುವುದರಿಂದ ನಾನಾ ರೀತಿಯ ಸಮಸ್ಯೆಗಳು ಈ ಸಮಾಜದಲ್ಲಿ ಎದುರಾಗುತ್ತಿವೆ. ಆದುದರಿಂದ ಇಂತಹ ಪ್ರವಚನಗಳು ಮಾನವೀಯ ಮೌಲ್ಯಗಳನ್ನು ಕಲಿಸುತ್ತವೆ ಎಂದು ಶಾಸಕ ಹಾಗೂ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಶ್ರೀ ಡಾ. ವಿಜಯಾನಂದ ಎಸ್ ಕಾಶಪ್ಪನವರ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ವಿಜಯ ಮಹಾಂತೇಶ್ ಅನುಭವ ಮಂಟಪದಲ್ಲಿ ಜಮಾಅತೆ ಇಸ್ಲಾಮೀ ಹಿಂದ ಇಲಕಲ್ ವತಿಯಿಂದ ಕೆಡುಕು ಮುಕ್ತ ಸಮಾಜ ಎಂಬ ವಿಷಯದ ಮೇಲೆ ನೆರವೇರಿದ ಕನ್ನಡದಲ್ಲಿ ಸಾರ್ವಜನಿಕ ಕುರಾನ್ ಪ್ರವಚನವನದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಮಾತನಾಡಿದ ಅವರು ಎಲ್ಲಾ ಸಮುದಾಯದವರು ಕೂಡ ಇಂತಹ ಅರಿವು ಮೂಡಿಸುವ , ಕೆಡುಕುಗಳನ್ನು ನಿರ್ಮೂಲನೆ ಮಾಡುವಂತಹ ಪ್ರವಚನಗಳನ್ನು ಏರ್ಪಾಡು ಮಾಡುವುದು ಉತ್ತಮ. ಈ ದೇಶದಲ್ಲಿ
ಬಹಳಷ್ಟು ಸಂಘಟನೆಗಳು ಈ ದೇಶವನ್ನು ಒಡೆದು ಹಾಕುವ ಕೆಲಸ ಮಾಡುತ್ತಿವೆ ಅಂತಹವರ ವಿರುದ್ಧ ಎಲ್ಲಾ ಸಜ್ಜನರು ಧ್ವನಿಗೂಡಿಸುವ ಅವಶ್ಯಕತೆ ಇದೆ ಎಂದರು. ನುಡಿದಂತೆ ನಡೆ ಇಲ್ಲದಿದ್ದರೆ ಇದೇ ಜೀವನ ಕಡೆ ಎಂಬ ಬಸವಣ್ಣನವರ ಮಾತನ್ನು ನೆನಪಿಸುತ್ತಾ ಕೇವಲ ಭಾಷಣ ಮತ್ತು ಪ್ರವಚನಗಳಿಗೆ ಸೀಮಿತವಾಗದೆ ನಮ್ಮ ಜೀವನದಲ್ಲಿಯೂ ಕೂಡ ಇದನ್ನು ಅಳವಳಿಸಿಕೊಂಡು ಮುಂದೆ ಸಾಗಬೇಕಾಗಿದ. ನಮ್ಮ ದೇಶ ಜಾತ್ಯತೀತತೆಯ ದೇಶ ಎಂಬ ಜಂಬ ಕೊಚ್ಚಿಕೊಳ್ಳದೆ ಹದಗೆಟ್ಟಿರುವ ಜಾತ್ಯಾತೀತತೆಯ ಕೆಳಭಾಗದಲ್ಲಿ ನಾವು ಕೆಲಸ ಮಾಡುವ ಅವಶ್ಯಕತೆ ಇದೆ ಎಂದರು.
ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಜನಾಬ ಲಾಲ ಹುಸೇನ್ ಕಂದಗಲ್ ರವರು ಮಾತನಾಡಿ ಸುಮಾರು 50 ವರ್ಷಗಳಿಂದ ನಗರದಲ್ಲಿ ತಮಾಅತೆ ಇಸ್ಲಾಮೀ ಹಿಂದ್ ತನ್ನ ಸೇವೆಯನ್ನು ತನ್ನ ಕರ್ತವ್ಯವೆಂದು ತಿಳಿದು ಹಗಲಿರುಳು ಶ್ರಮಿಸುತ್ತಾ ಬಂದಿದೆ , ದೇಶದಲ್ಲಿ ನೈಜ್ಯ ಮೌಲ್ಯದೆಡೆಗೆ ಸುಮಾರು 80 ವರ್ಷಗಳಿಂದ ಹಲವಾರು ವಿಭಾಗಗಳೊಂದಿಗೆ ವ್ಯವಸ್ಥಿತ ರೀತಿಯಲ್ಲಿ ಸಮಾಜ ಸುಧಾರಣಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ . ಇದೇ ರೀತಿಯಾಗಿ ಮುಂದುವರೆದು ಮಾತನಾಡಿದ ಅವರು ಪ್ರೀತಿ ವಿಶ್ವಾಸದಿಂದ ಈ ಸಮಾಜ ಮುನ್ನಡೆಯಲಿ ಎಂದು ಈ ಪ್ರವಚನದ ಮೂಲ ಉದ್ದೇಶವಾಗಿದೆ , ಇದು ಕೇವಲ ಮುಸ್ಲಿಮರ ಕಾರ್ಯಕ್ರಮವಲ್ಲದೆ ಇದು ಇಳಕಲ್ ನಗರದ ಕಾರ್ಯಕ್ರಮವಾಗಿದೆ ಎಂದರು.

ಮುಖ್ಯ ಪ್ರವಚನಕಾರರಾದ ನಾಡಿನ ಖ್ಯಾತ ವಾಗ್ಮಿಗಳು ಹಾಗೂ ಶಾಂತಿ ಪ್ರಕಾಶನದ ವ್ಯವಸ್ಥಾಪಕರಾಗಿರುವ ಜನಾಬ ಮುಹಮ್ಮದ್ ಕುಂಞಿ ರವರು ಕೆಡಕು ಮುಕ್ತ ಸಮಾಜ ಎಂಬ ವಿಷಯದ ತಮ್ಮ ಪ್ರವಚನದಲ್ಲಿ ಅಜ್ಞಾನ ಎಂಬುದು ಕತ್ತಲು, ಈ ಅಜ್ಞಾನದ ವಿರುದ್ಧ ಧರ್ಮಗಳ ಬೆಳಕು ಹಾಗೂ ಹೆಚ್ಚು ಹೆಚ್ಚು ಅರಿವು ಮೂಡಿಸುವ ಪ್ರಯತ್ನಗಳನ್ನು ನಮ್ಮದಾಗಿಸಬೇಕು ಎಂದರು. ಮನುಷ್ಯರ ಮಧ್ಯೆ ನಿರಂತರ ಅಂತರ ಹೆಚ್ಚಾಗುತ್ತಿದೆ ಮನುಷ್ಯನ ಸುತ್ತ ಇಂದು ಭಯದ ವಾತಾವರಣ ಸೃಷ್ಟಿಯಾಗಿದೆ ಇದೇ ವರ್ಷದಲ್ಲಿ ದೇಶದ 2079 ವಿದ್ಯಾರ್ಥಿಗಳು ಭಯದಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ನೆನಪಿಸುತ್ತಾ ಮಾತನಾಡಿದ ಅವರು ಪ್ರವಾದಿಗಳು ಈ ಜಗತ್ತಿನಲ್ಲಿ ಹೆದರಿಸಲು ಬಂದವರಲ್ಲ ಬದಲಾಗಿ ಪ್ರೀತಿಯಿಂದ ಹಾಗೂ ನೆಮ್ಮದಿಯೊಂದಿಗೆ ನಿರ್ಭಯವಾಗಿ ಬದುಕುವ ದಾರಿಯನ್ನು ಸಮಾಜಕ್ಕೆ ತೋರಿಸಲು ಬಂದವರು , ದೇವರಿಂದ ಜನರ ಮಾರ್ಗದರ್ಶನಕ್ಕಾಗಿ ಕುರಾನ್ ಅವತೀರ್ಣಗೊಂಡಿದೆ ಇದೇ ಕುರಾನಿನ 13 ಕಡೆಯಲ್ಲಿ ಭಯವಿಲ್ಲದೆ ಬದುಕುವ ದಾರಿ ತೋರಿಸಿ , ಜನರನ್ನು ಭಯದಿಂದ ಹೊರ ತೆಗೆದು ಎಲ್ಲಾ ಕೆಡುಕುಗಳ ವಿರುದ್ಧ ಬದುಕುವ ಉದ್ದೇಶ ತೋರಿಸಿ ಕೊಡುವ ಹಲವಾರು ನಿದರ್ಶನಗಳಿವೆ . ಮನುಷ್ಯರನ್ನು ಬೇರ್ಪಡಿಸುವ ಒಂದು ಅಂಶವು ಕುರಾನಿನಲ್ಲಿ ಸಿಗುವುದಿಲ್ಲ ಎಲ್ಲಾ ಮನುಷ್ಯರ ಹೃದಯಗಳನ್ನು ಜೋಡಿಸುವ ಗ್ರಂಥ ಇದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಒಬ್ಬ ಮನುಷ್ಯನನ್ನು ಕೊಂದರೆ ಇಡೀ ಮಾನವ ಕುಲವನ್ನೇ ಕೊಂದಹಾಗೆ ಎಂದು ಎಚ್ಚರಿಸುವ ತತ್ವಗಳು ಕುರಾನಿನಲ್ಲಿ ಸಿಗುತ್ತವೆ ಒಂದು ಜೀವವನ್ನು ಉಳಿಸಿದರೆ ಇಡೀ ಮಾನವ ಕುಲವನ್ನೇ ಉಳಿಸಿದಂತೆ ಎಂದು ಈ ಗ್ರಂಥ ಸಾರುತ್ತದೆ. ಸಹೋದರ ಸಹೋದರರ ಮಧ್ಯೆ ಭಿನ್ನಾಭಿಪ್ರಾಯಗಳು ಇರಕೂಡದು ನಿಮ್ಮ ಸಹೋದರರ ಮುಖವನ್ನು ನೋಡಿದಾಗ ನಿಮ್ಮ ಮುಖದಲ್ಲಿ ಹರ್ಷೋದ್ಘಾರವನ್ನು ತರಬೇಕು , ಈ ಕಾಲ ಚಿನ್ನಕ್ಕೂ ತುಕ್ಕು ಹಿಡಿಯುವ ಕಾಲ, ಎಲ್ಲರೂ ಕೆಟ್ಟು ಹೋಗುತ್ತಿರುವ ಕಾಲ. ಪುರುಷರು ಮತ್ತು ಮಹಿಳೆಯರು ಎನ್ನದೆ ಯುವಕರು ಮತ್ತು ವೃದ್ಧರು ಎನ್ನದೆ ಎಲ್ಲರೂ ಕೆಡುಕುಗಳಲ್ಲಿ ತಲ್ಲೀನ ರಾಗಿರುವ ಕಾಲ ಇಂತಹ ಕಾಲದಲ್ಲಿ ಮನುಷ್ಯರ ಮನಸ್ಸುಗಳು ಮಾಲಿನ್ಯವಾಗಿವೆ . ಮನುಷ್ಯ ಮನುಷರ ಮಧ್ಯ ಪೈಶಾಚಿಕ ಕೃತ್ಯಗಳು ನಡೆಸುವವರು ಮನುಷ್ಯರಲ್ಲ ಬದಲಾಗಿ ಪಿಶಾಚಿಗಳು ಎಂದರು. ಕಲ್ಚರಲ್ ಲಿಬರಲಿಸಂ ನ ಕಾಲ ಇದು ಎಂದು ಮಾತನಾಡಿದ ಅವರು ‌ ಹಿಂದೆ ಈ ಸಮಾಜ ಕೆಟ್ಟವರನ್ನು ಸಮಾಜದ ಆಚೆ ಇಡುತ್ತಿತ್ತು ಆದರೆ ಇಂದು ಇದೇ ಕೆಟ್ಟ ಜನರನ್ನು ನಮ್ಮ ನಾಯಕರನ್ನಾಗಿ ಮಾಡುತ್ತಿರುವಂತಹದ್ದು ಬಹಳ ದುಃಖದ ಸಂಗತಿ. ಸಮಸ್ಯೆಗಳನ್ನು ಸೃಷ್ಟಿಸುತ್ತಿರುವವರು ಇಂದು ನಾಯಕರುಗಳಾಗಿ ಮಾರ್ಪಡುತ್ತಿದ್ದಾರೆ , ಅತ್ಯಾಚಾರಿಗಳನ್ನು ಸ್ವಾಗತಿಸುವ ಸಮಾಜವನ್ನು ನಾವು ಕಣ್ಣಾರೆ ಕಂಡಿದ್ದೇವೆ. ಅಶ್ಲೀಲತೆಯನ್ನು ಅನೈತಿಕತೆಯನ್ನು ಬಹಳ ಸರಳವಾಗಿ ತೆಗೆದುಕೊಳ್ಳುತ್ತೇವೆ ಇದರ ವಿರುದ್ಧ ನಮ್ಮ ನಿಯಮಗಳು ರೂಪಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬದುಕಿಗೆ ನಿಯಮಗಳು ನೀತಿಗಳು ಬೇಕಾಗಿದೆ ಇವೆಲ್ಲವೂ ಧರ್ಮಗಳು ಕಲಿಸಿಕೊಡುತ್ತವೆ. ಪರಸ್ಪರರ ಮಧ್ಯೆ ಅಸೂಹೆ ಆತ್ಮಹತ್ಯೆಗೆ ನಾಂದಿ ಹಾಡುತ್ತಿವೆ ಇವೆಲ್ಲವನ್ನೂ ನೋಡಿಕೊಂಡು ಸುಮ್ಮನಿದ್ದರೆ ಮುಂದಿನ ತಲೆಮಾರುಗಳಿಗೆ ಇದು ಘಾತಕವಾಗಿ ಮಾರ್ಪಡುತ್ತದೆ ಎಂದರು.

ಈ ಕಾರ್ಯಕ್ರಮದ ದಿವ್ಯಸಾನಿಧ್ಯ ಸ್ಥಾನವನ್ನು ಅಲಂಕರಿಸಿ ಮಾತನಾಡಿದ ಅಖಿಲ ಭಾರತ ದೇವಾಂಗ ಗುರುಗಳಾದ ಹಾಗೂ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನ ಹೇಮ ಕೂಟ ಹಂಪಿ ಇದರ ಪೀಠಾಧಿಪತಿಗಳಾದ ಶ್ರೀ ಶ್ರೀ ದಯಾನಂದ ಪುರಿ ಮಹಾಸ್ವಾಮಿಗಳು ಮಾತನಾಡಿ ಈ ಜಗತ್ತಿನಲ್ಲಿ ಯಾರೂ ಕೂಡ ಜಾತಿಯಲ್ಲಿ ಅಥವಾ ಈ ಧರ್ಮದಲ್ಲಿ ಹುಟ್ಟಿಸು ಎಂದು ದೇವರಲ್ಲು ಬೇಡಿ ಬಂದವರಲ್ಲ ಭೂಮಿಗೆ ಬರಬೇಕಾದರೆ ನಾವು ಏನನ್ನು ಪಡೆದುಕೊಂಡು ಬಂದವರಲ್ಲ ಹೋಗುವಾಗವೂ ಕೂಡ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ ಪಡೆದುಕೊಂಡು ಹೋಗುವುದು ಯಾವುದಾದರೂ ಇದ್ದರೆ ಅದು ನಮ್ಮ ಪುಣ್ಯ ಕರ್ಮಗಳು. ಪ್ರವಾದಿಗಳು ಶರಣರು ದಾಸಿಮಯ್ಯನವರು ಹೇಳಿದಂತೆ ಇಳೆ ನಿಮ್ಮ ದಾನ ಬೆಳೆ ನಿಮ್ಮದಾನ ಸುಳಿದು ಬೀಸುವ ಗಾಳಿ ಅದು ನಿಮ್ಮದಾನ ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥಾ ಎಂಬ ವಚನದ ಸಾಲದಲ್ಲಿ ನಮ್ಮ ಜೀವನವನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಪ್ರಾಣಿಗಳಿಗಿಂತ ಮನುಷ್ಯನಿಗೆ ಒಂದು ಯೋಚನಾ ಶಕ್ತಿಯನ್ನು ದೇವನು ನೀಡಿದ್ದಾನೆ ಈ ಯೋಚನಾ ಶಕ್ತಿ ಧರ್ಮಗಳಿಂದ ಕಲಿಯಬೇಕಾಗುತ್ತದೆ ಬೆಳಕಿನೆಡೆಗೆ‌ ಕರೆಯುವ ಸಾಧನವನ್ನು ಧರ್ಮ ಎಂದು ಕರೆಯುತ್ತೇವೆ ಎಂದು ‌ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ಘಟಕದ ರಾಜ್ಯಾಧ್ಯಕ್ಷರಾದ ಡಾ” ಸಾದ್ ಬೆಳಗಾಮಿ ರವರು ಮಾತನಾಡಿ ಇಂದು ನಮ್ಮಲ್ಲಿ ಮಾನವೀಯತೆ ಕುಸಿಯುತ್ತಿದೆ ಭಿನ್ನಾಭಿಪ್ರಾಯಗಳು ಕೆಡುಕುಗಳು ವ್ಯಾಪಕವಾಗಿ ನಡೆಯುತ್ತಿವೆ ಭ್ರಷ್ಟಾಚಾರ ವಿಚಾರ ಅತ್ಯಾಚಾರಗಳಂತಹ ರೋಗಗಳಲ್ಲಿ ಸಮಾಜ ಸಿಲುಕುತ್ತಿದೆ , ಈ ಜಗತ್ತಿನಲ್ಲಿ ದೇವನು ನಮಗೆ ಸ್ವತಂತ್ರವಾಗಿ ಬಿಟ್ಟಿದ್ದಾನೆ ಇಂತಹದರಲ್ಲಿ ನಮ್ಮ ಜೀವನದ ಉದ್ದೇಶವನ್ನು ಅರಿತು ನಮ್ಮ ಸೃಷ್ಟಿಕರ್ತನನ್ನು ಅರಿತು ಬದುಕು ಕೊಟ್ಟಿಕೊಳ್ಳಬೇಕಾಗಿದೆ. ಒಳಿತನ್ನು ಸ್ಥಾಪಿಸಲು ಕೆಡಕನ್ನು ನಿರ್ಮೂಲನೆ ಮಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದ ಅವರು ಕೆಡುಕನ್ನು ಪಸರಿಸಲಿಕ್ಕೆ ಆದ್ಯತೆಯನ್ನು ನೀಡಬಾರದು ಒಳಿತನ್ನು ಸಾಧಿಸುವ ಪ್ರಯತ್ನಗಳು ಸದಾ ಮಾಡುತ್ತಾ ಸಾಗಬೇಕು ಎಂದು ನುಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ವಿ.ಮ.ವಿದ್ಯಾವರ್ಧಕ ಸಂಘ ಇಲಕಲ್ ಇದರ ವಾಯ್ಸ್ ಚೇರ್ಮನ್ ರಾಗಿರುವ ಶ್ರೀ ಅರುಣ್ ಎ ಬಿಜ್ಜಲ , ಜಮಾಅತೆ ಇಸ್ಲಾಮೀ ಹಿಂದ ನ ಸ್ಥಾನೀಯ ಅಧ್ಯಕ್ಷ ರಾದ ಜನಾಬ ಹುಸೇನ ಬಾಶಾ ಸುಳಿಭಾವಿ , ಗಣ್ಯರಾದ ಶ್ರೀ ಶಾಂತಕುಮಾರ್ ಸುರಪುರ ಶ್ರೀ ರಾಜು ಬೋರ , ಶ್ರೀ ಮುನಿಸ್ವಾಮಿ ದೇವಾಂಗಮಠ , ಶ್ರೀ ನಾಗಪ್ಪ ಕನ್ನೂರ , ಶ್ರೀ ಚನ್ನಪ್ಪ ಗೌಡ ನಾಡಗೌಡರು , ಶ್ರೀ ವಿಜಯ ಮಹಾಂತೇಶ್ ಗದ್ದನಕೇರಿ , ಪ್ರೊಫೆಸರ್ ಶಿವಾನಂದ , ಶ್ರೀ ರವೀಂದ್ರ ಕಲಬುರ್ಗಿ , ಶ್ರೀ ಸಂತೋಷ್ ಬನ್ನಟ್ಟಿ , ಶ್ರೀ ಸಂತೋಷ್ ಬಸವರಾಜ ಐಹೊಳಿ , ಶ್ರೀ ಶರಣಬಸಪ್ಪ ಆಜೂರ , ಶ್ರೀನಿವಾಸ್ ಜಾಧವ , ಶ್ರೀ ವಿಶ್ವನಾಥ ವಿ ಪಾಟೀಲ , ಶ್ರೀ ಹನುಮಂತಪ್ಪ ರಾಥೋಡ , ಶ್ರೀ ಸುರೇಶ್ ಜಂಗಲಿ , ಶ್ರೀ ಮಹಾಂತೇಶ್ ಹನಮನಾಳ , ಡಾ”ಪವನಕುಮಾರ ದರಕ , ಶ್ರೀ ಮಹಾಂತೇಶ ಹನುಮನಾಳ , ಜನಾಬ ಹುಸೇನಸಾಬ ಬಾಗವಾನ , ಜನಾಬ್ ಮೊಹಮ್ಮದ್ ಭಾವಿಕಟ್ಟಿ , ಶ್ರೀ ವೆಂಕಟೇಶ ರಾಥೋಡ , ಶ್ರೀ ಮೌಲಪ್ಪ ಬಂಡಿ ವಡ್ಡರ , ಜನಾಬ್ ಮೊಹಮ್ಮದ್ ಗೌಸ್ ನದಾಫ್, ಜನಾಬ ಸೈಯದ್ ಬಹಾವುದ್ದೀನ್ ಖಾಜಿ , ಜನಾಬ್ ಕಾಸಿಮಸಾಬ ವಂಟಿ , ಶ್ರೀ ಎಲ್ಲಪ್ಪ ಪೂಜಾರಿ ಶ್ರೀ ಎಂ ಬಿ ದೇಶಪಾಂಡೆ , ಶ್ರೀ ಮಹಾಂತೇಶ ಕಡಿವಾಲ, ಮೌಲಾನ ಮುಫ್ತಿ ಹಸನ್ ಶಾಹಿ , ಜನಾಬ ಮೊಹಮ್ಮದ್ ಆಸಿಫ್ ಬಿಳೇಕುದುರಿ , ಮೌಲಾನ ಮೊಹಮ್ಮದ್ ಹುಸೇನ್ ರಶಾದಿ, ಜನಾಬ ಮೊಹಮ್ಮದ್ ರಫೀಕ್ ಮುದಗಲ್ , ಜನಾಬ ರಾಜು ಏನ್ ಬನ್ನಿಗೋಳ , ಜನಾಬ ಸುಈದ್ ಅಹಮದ್ ಕೋತ್ವಾಲ್ , ಶ್ರೀ ನಾಗರಾಜ್ ಮದಿಕೇರಿ , ಜನಾಬ ಅಬ್ದುಲ್ ರಜಾಕ್ ಹಳ್ಳಿ , ಜನಾಬ ಮೆಹಬೂಬಸಾಬ ಆರಿ , ಶ್ರೀ ಅಶೋಕ ಗಂಜಿಹಾಳ , ಶ್ರೀ ನೀಲಪ್ಪ ಡೊಳಿ, ಜನಾಬ್ ಪರ್ವೇಜ್ ಕಾಜಿ , ಜನಾಬ ಅಬೂಬಕರ್ ಎಲ್ ಬೇಪಾರಿ, ಜನಾಬ ಮೊಹಮ್ಮದ್ ರಫೀಕ್ ಚಿತ್ತರಗಿ, ಶ್ರೀಮತಿ ಶರಣಮ್ಮ ತಳವಾರ್, ಡಾ” ಸಿ ತಿ ಮಾ ವಜ್ಜಲ , ಶ್ರೀಮತಿ ಸರಸ್ವತಿ ಈಟಿ , ಶ್ರೀಮತಿ ಮಂಜುಳಾ ಗರಡಿಮನಿ , ಶ್ರೀಮತಿ ವಿದ್ಯಾ ದಿನ್ನಿ , ಶ್ರೀಮತಿ ವೈಶಾಲಿ ಘಂಟಿ , ಶ್ರೀಮತಿ ಸುಮಿತ್ರ ರಜಪೂತ ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಸಹೋದರ ಸಹೋದರಿಯರು ಉಪಸ್ಥಿತರಿದ್ದರು

ಮೊಹಮ್ಮದ್ ಸಿರಾಜುದ್ದೀನ್ ಹುಮನಾಬಾದ್ ಕುರಾನ್ ಪಥಿಸಿದರು ಶ್ರೀ ಸಂಗಣ್ಣ ಗದ್ದಿ ಪ್ರವಚನ ಸ್ವಾಗತ ಸಮಿತಿಯ ಸದಸ್ಯರು ಸ್ವಾಗತ ಭಾಷಣ ಮಾಡಿದರು , ಜನಾಬ ಮೆಹಬೂಬ್ ಹುಸೇನ್ ಗಬ್ಬೂರ ಹಾಗೂ ಅಬ್ದುಲ್ ಗಫ್ಫಾರ್ ತಹಶೀಲ್ದಾರ್ ರವರು ನಿರೂಪಿಸಿದರು ಜನಾಬ ಮಹಮ್ಮದ್ ಹುಸೇನ್ ಬಾಗವಾನ್ ರವರು ವಂದಿಸಿದರು.

Leave a Reply

Your email address will not be published. Required fields are marked *