ತಾಳಿಕೋಟಿ: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಕ್ಲರ್ಕ್ ಡೇಟಾ ಎಂಟ್ರಿ ಆಪರೇಟರ್ ಗಳ ಕ್ಷಮಾಭಿವೃದ್ಧಿ ಸಂಘದಿಂದ ಕಂಪ್ಯೂಟರ್ ಪಿತಾಮಹ ಚಾರ್ಲೆಸ್ ಬ್ಯಾಬೇಜ್ ಸ್ಮರಣಾರ್ಥ ಕಂಪ್ಯೂಟರ್ ಆಪರೇಟರ್ ಗಳ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅನಸೂಯಾ ಚಲವಾದಿ ಅವರು ಮಾತನಾಡಿ ಸಾರ್ವಜನಿಕರಿಗೆ ನಿಗಧಿತ ಅವಧಿಯಲ್ಲಿ ಸೇವೆ ಸಲ್ಲಿಸಲು ಕಂಪ್ಯೂಟರ್ ಡೇಟಾ ಎಂಟ್ರಿ ಸಹಾಯಕರ ಸೇವೆ
ಅಪಾರವಾಗಿದೆ. ತಾಲೂಕಿನ ಎಲ್ಲಾ ಗಣಕಯಂತ್ರ ನಿರ್ವಾಹಕರು ಪ್ರಮಾಣಿಕವಾಗಿ ಕೆಲಸ ಮಾಡಿ ಮತ್ತು ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಬೇಕಾದರೆ ಹೆಚ್ಚಿನ ಜ್ಞಾನ ಮತ್ತು ಸಾಮರ್ಥ್ಯ ಹೊಂದಿರಬೇಕು. ಆಗಾಗ ಆಗುವ ಬದಲಾವಣೆಗೆ ತಕ್ಕಂತೆ ಹೆಚ್ಚಿನ ಕೌಶಲ್ಯದ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ
ಪಿಡಿಓ ಪ್ರಕಾಶ ಅಂಜುಟಗಿ, ಆಯ್.ಡಿ.ಬಡಿಗೇರ, ಐಇಸಿ ಸಂಯೋಜಕ ಮಲಕಪ್ಪ, ಮಹಾಂತಗೌಡ ದೊರೆಗೋಳ, ಜಗದೀಶ್ ಲಮಾಣಿ, ಮಡಿವಾಳಪ್ಪ ತಳವಾರ, ಡಾಟಾ ಎಂಟ್ರಿ ಆಪರೇಟರ್ ಗಳಾದ ಗುರುನಾಥ ಬಿರಾದಾರ, ಆನಂದ ಮದರ್ಕಲ್, ಅಶೋಕ ನಾಟಿಕರ, ವೀರೇಶ ಹೊಸಮನಿ, ಡಿ.ಎಸ್.ಹಿರೇಮಠ, ಬಸವರಾಜ ಮಸರಕಲ್, ಮಲ್ಲು ಇಂಗಳೇಶ್ವರ, ಸಂತೋಷ ನಾಯ್ಕೋಡಿ, ಸಿದ್ದರಾಜ ಬಡಿಗೇರ ಮತ್ತಿತರರು ಇದ್ದರು

