ತಾಳಿಕೋಟಿ: ಮಕ್ಕಳಿಲ್ಲದ ಕೊರಗನ್ನು ಮರೆತು ಸಾವಿರಾರು ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಸ್ವಂತ ಮಕ್ಕಳಂತೆ ಬೆಳೆಸಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕಳ ಪರಿಸರ ಕಾಳಜಿ ನಮ್ಮೆಲ್ಲರಿಗೂ ಮಾದರಿ ಯಾಗಬೇಕಾಗಿದೆ ಎಂದು ಶಾಸಕ,ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ(ಅಪ್ಪಾಜಿ) ಹೇಳಿದರು. ಗುರುವಾರ ಹಸಿರು ಸಂಪದ ಬಳಗದ ವತಿಯಿಂದ ಪಟ್ಟಣದ 5 ಮತ್ತು6 ನೇ ವಾರ್ಡಿನ ಉದ್ಯಾನವನದಲ್ಲಿ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಸಿರು ಸಂಪದ ಬಳಗದ ಪದಾಧಿಕಾರಿಗಳು ಪಟ್ಟಣದ ಜನರಲ್ಲಿ ಪರಿಸರ ಪ್ರಜ್ಞೆ ಜಾಗೃತಿಗೊಳಿಸುವ ಕಾರ್ಯವನ್ನು ಮಾಡುತ್ತಿರುವುದು ಸಂತೋಷದ ವಿಷಯ ಅವರಿಗೆ ತಾವೆಲ್ಲರೂ ಸಹಕರಿಸಬೇಕು. ಪಟ್ಟಣವನ್ನು ಹಸಿರನ್ನಾಗಿಸುವಲ್ಲಿ ಸಾಮುದಾಯಿಕ ಭಾಗವಹಿಸಿಕೆಯು ಅಷ್ಟೇ ಮುಖ್ಯವಾಗಿದೆ ಮುಂದಿನ ದಿನಗಳಲ್ಲಿ ಈ ಎರಡು ವಾರ್ಡ್ ಗಳ ಉದ್ಯಾನವನವನ್ನು ಅಭಿವೃದ್ಧಿಗೊಳಿಸುವ ಕಾರ್ಯ ಮಾಡಲಾಗುವುದು ಇದರಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪದ ಅಗತ್ಯವಿಲ್ಲ, ಇಡೀ ಪಟ್ಟಣದ ಅಭಿವೃದ್ಧಿಗೆ ನಾನು ಬದ್ಧನಾಗಿರುವೆ ಈ ಉದ್ದೇಶಕ್ಕಾಗಿಯೇ ಕಳೆದ ಐದು ದಿನಗಳಿಂದ ಪಟ್ಟಣದ ಪ್ರವಾಸಿನಲ್ಲಿದ್ದೇನೆ ಪಟ್ಟಣದಲ್ಲಿ ಒಂದು ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣದ ಬೇಡಿಕೆಯನ್ನು ಇಡಲಾಗಿದೆ ಇದನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ವಹಿಸಲು ಪ್ರಯತ್ನಿಸುತ್ತೇನೆ ಎಂದರು. ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈ ಭೀಮ ಮುತ್ತಗಿ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಮಯದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ್ ಅಹಮದ್ ಖಾಜಿ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ, ಪಿಎಸ್ಐ ಜ್ಯೋತಿ ಖೋತ್, ಅರಣ್ಯಾ ಧಿಕಾರಿಗಳಾದ ಬಸನಗೌಡ ಬಿರಾದಾರ, ಗಿರೀಶ್ ಹಲಕುಡೆ, ಹಸಿರು ಸಂಪದ ಬಳಗದ ಅಧ್ಯಕ್ಷ ಡಾ.ವಿಜಯಕುಮಾರ ಕಾರ್ಚಿ,ಉಪಾಧ್ಯಕ್ಷ ಪ್ರಭುಗೌಡ ಮದರಕಲ್ಲ,ಸಂಚಾಲಕ ಎಸ್.ಎಸ್.ಗಡೇದ, ಶ್ರೀಕಾಂತ್ ಪತ್ತಾರ, ಪ್ರಶಾಂತ ಜನಾದ್ರಿ, ಮುಖಂಡರಾದ ಸಿದ್ದನಗೌಡ ಪಾಟೀಲ ನಾವದಗಿ,ನೀಲಮ್ಮಗೌಡತಿ ಪಾಟೀಲ, ಶರಣು ಧಣಿ,ಸಂಗನಗೌಡ ಅಸ್ಕಿ, ಮೆಹಬೂಬ ಕೆಂಭಾವಿ, ಬಸನಗೌಡ ಜೈನಾಪೂರ, ಜೈಸಿಂಗ್ ಮೂಲಿಮನಿ, ಇಬ್ರಾಹಿಂ ಮನ್ಸೂರ್, ಮಹೆಬೂಬ ಲಾಹೋರಿ, ಮಹೆಬೂಬಶಾ ಮಕಾನದಾರ, ಮುದ್ದು ಪಟೇಲ, ಶಫೀಕ್ ಇನಾಮದಾರ, ಸದ್ದಾಮ್ ಹೊನ್ನಳ್ಳಿ, ಮೋದಿನ ನಗಾರ್ಚಿ, ಅಶ್ರಫ್ ಜಮಾದಾರ, ರಿಯಾಜ್ ಮುಲ್ಲಾ, ಜಾವೇದ ಕೆಂಭಾವಿ, ಇಕ್ಬಾಲ್ ಆಗ್ರಾ, ಮುರ್ತುಜಾ ಜಮಾದಾರ, ಇಬ್ರಾಹಿಂ ಆರಬೋಳ, ಪುರಸಭೆ ಸಿಬ್ಬಂದಿಗಳು ಹಾಗೂ ವಾರ್ಡ್ ನಿವಾಸಿಗಳು ಇದ್ದರು.

Leave a Reply

Your email address will not be published. Required fields are marked *