ತಾಳಿಕೋಟೆ:
ಪಟ್ಟಣದ ವಿಪಿಎಂ ಮತ್ತು ಸೆಕ್ರೆಡ್ ಹಾರ್ಟ್ ಇಂಗ್ಲೀಷ್ ಮಿಡಿಯಂ ಶಾಲೆಯಲ್ಲಿ ಕ್ರಿಸ್ತ ಜಯಂತಿಯ ಪ್ರಯುಕ್ತ ಸರ್ವ ಧರ್ಮ ಸಹಭಾಗಿತ್ವದಲ್ಲಿ ಅಂತರ ಧರ್ಮೀಯ ಸೌಹಾರ್ದ ಕೂಟವನ್ನು ಮಂಗಳವಾರ ಆಯೋಜಿಸಲಾಗಿತ್ತು
ಅಧ್ಯಕ್ಷತೆಯನ್ನು ಬಿಜಾಪುರ ಜೆಸ್ವಿಟ್ ಎಜುಕೇಷನಲ್ & ಚಾರಿಟೇಬಲ್ ಸೊಸೈಟಿ, ವಿಜಯಪುರ ವಲಯ ಮುಖ್ಯಸ್ಥ ಸ್ವಾಮಿ ಸುನೀಲ್ ಫೆರ್ನಾಂಡಿಸ್ ಯೇ.ಸ. ವಹಿಸಿ ಮಾತನಾಡಿ, ಎಲ್ಲ ಧರ್ಮಗಳ ತಿರುಳೊಂದೇ ಆಗಿದ್ದು ಅದು ಪ್ರೀತಿ ಶಾಂತಿ ಮತ್ತು ಮಾನವೀಯತೆಯೇ ಆಗಿದೆ ಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿ ಆರ್.ಬಿ. ಧಮ್ಮೂರ್ಮಠ ಮಾತನಾಡಿ, ಸರ್ವಧರ್ಮ ಸಮಾನತೆ ಮತ್ತು ಪರಸ್ಪರ ಗೌರವ ಸಮಾಜದ ಸುಸ್ಥಿರತೆಗೆ ಅಗತ್ಯವಾಗಿದೆ ಎಂದರು.
ಸಭೆಯಲ್ಲಿ ಗುಂಡಕನಾಳ ಗಡಿ ಸೊಮನಾಳ ಬೃಹನ್ಮಠದ ಗುರುಲಿಂಗ ಶಿವಾಚಾರ್ಯರು ಮಾತನಾಡಿ,ವಿದ್ಯಾರ್ಥಿಗಳು ಸಹಬಾಳ್ವೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕು ಎಂದರು.
ವೇದಿಕೆಯಲ್ಲಿ ಸಿ.ಆರ್.ಪಿ. ರಾಜಸಿಂಗ ವಿಜಯಪುರ, ಬಿ.ಆರ್.ಪಿ ಕಾಶಿನಾಥ ಸಜ್ಜನ, ಕರುಣಾಮಯ ಇನ್ ಫ್ರಾ, ಮುದ್ದೆಬಿಹಾಳ್ ಮಾಲೀಕ ಪ್ರಸಾದ್ ಗಟ್ಟಿ, ಉದ್ಯಮಿದಾರ ಶ್ರೀಶೈಲ್ ದೊಡ್ಡಮನಿ ಉಪಸ್ಥಿತರಿರುವರು ಎಂದು ವಿಪಿಎಂ ಮತ್ತು ಸೆಕ್ರೆಡ್ ಹಾರ್ಟ್ ಇಂಗ್ಲೀಷ್ ಮಿಡಿಯಂ ಶಾಲೆಯ ಸಂಚಾಲಕ ಸ್ವಾಮಿ ಸುನೀಲ್ ಅಂದ್ರಾದೆ ಇದ್ದರು


