ಕೊಡೇಕಲ್ಲ: ಶಿಕ್ಷಣ ಹಾಗೂ ಹಣದ ವ್ಯಾಮೋಹದೊಂದಿಗೆ ಬದುಕುತ್ತಿರುವ ಸಮಾಜಘಾತುಕರು , ಶಿಕ್ಷಣದಲ್ಲಿ ಪಾಂಡಿತ್ಯವನ್ನು ಗಳಿಸಿದ ಕೆಲವರು ಇಂದು ತನ್ನ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ದೂಡುತ್ತಿದ್ದಾರೆ. ಬಹುತೇಕ ದೊಡ್ಡ ದೊಡ್ಡ ನಗರಗಳಲ್ಲಿ ಜನರು ತಂದೆ ತಾಯಿಯರನ್ನು ನೋಡದೆ ನಾಯಿಗಳನ್ನು ಸಾಕುವ ಪ್ರಸಂಗ ಕಾಣಸಿಗುತ್ತಿದೆ ಎಂದು ನಾಡಿನ ಖ್ಯಾತ ವಾಗ್ಮಿಗಳು ಚಿಂತಕರು ಆದಂತಹ ಶ್ರೀ ಅಕ್ಬರ್ ಅಲಿ ಉಡುಪಿ ರವರು ಹೇಳಿದರು. ಪರಮ ಪೂಜ್ಯಶ್ರೀ ಬಸವರಾಜಯ್ಯ ಅಪ್ಪನವರ 71ನೇ ಪುಣ್ಯಾರಾಧನೆ ಅಂಗವಾಗಿ ನಡೆದ ಧರ್ಮ ಸಭೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಉಪನ್ಯಾಸವನ್ನು ನೀಡಿದರು. ಮಠ ಮಂದಿರ ಮಸೀದಿಗಳಲ್ಲಿ ಚರ್ಚ್ ಗಳಲ್ಲಿ ಧರ್ಮದ ಬೋಧನೆಯನ್ನು ಸರಿಯಾದ ರೀತಿಯಲ್ಲಿ ಮಾಡುವ ಅವಶ್ಯಕತೆ ಇದೆ. ಧರ್ಮಗಳು ಬಂದದ್ದು ಮನಸ್ಸನ್ನು ಜೋಡಿಸಲಿಕ್ಕಾಗಿ ವಿನಃ ಮನಸ್ಸನ್ನು ಹೊಡೆಯುವ ಕೆಲಸ ಧರ್ಮಗಳು ಎಂದಿಗೂ ಮಾಡುವುದಿಲ್ಲ. ಇಂದು ಧರ್ಮದ ಹೆಸರಿನಲ್ಲಿ ಜಾತಿ ಹೆಸರಿನಲ್ಲಿ ಪರಸ್ಪರರಲ್ಲಿ ಹಗೆತನ ದ್ವೇಷ ಅರಾಜಕತೆ ಕೀಳು ಮೇಲು ಎಂಬ ಮನಸ್ಥಿತಿ ಕಾಣಸಿಗುತ್ತಿದೆ ಇಂತಹ ಮನೋಭಾವ ನಮ್ಮ ಸಮೀಪವು ಬರುದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ನುಡಿದರು. ಸಮಾಜ ಸುಧಾರಣೆಯಾಗಬೇಕಾದರೆ ನಮ್ಮ ಕುಟುಂಬ ಸುಧಾರಿಸಬೇಕು, ನಮ್ಮ ಕುಟುಂಬ ಸುಧಾರಿಸಬೇಕಾದರೆ ನಮ್ಮ ಮನೆಯವರ ಸಂಸ್ಕಾರ ಸುಧಾರಣೆಯಾಗಬೇಕು.ಮುಂದುವರೆದು ಮಾತನಾಡಿದ ಅವರು. ಮನೆಯಲ್ಲಿ ಪ್ರೀತಿ ಮಮತೆಯಿಂದ ಎಲ್ಲರೂ ಕಾಣಬೇಕು. ಒಬ್ಬ ಪತಿ ತನ್ನ ಪತ್ನಿಗೆ ರಾಜನಾಗಬೇಕು ಒಬ್ಬ ಪತ್ನಿ ತನ್ನ ಪತಿಗೆ ರಾಣಿ ಆಗಬೇಕು. ಯಾವತ್ತಿಗೂ ಪತಿಗೆ ಕೂಲಿ ಕಾರ್ಮಿಕ ಎಂದು ತಿಳಿದುಕೊಂಡರೆ ಕೂಲಿ ಕಾರ್ಮಿಕನ ಹೆಂಡತಿಯು ಕೂಡ ಕೂಲಿ ಕಾರ್ಮಿಗಳಾಗುತ್ತಾಳೆ. ಮನೆ ಸುಧಾರಿಸಿತು ಎಂದಾಗ ಕುಟುಂಬ ಸುಧಾರಿಸತ್ತದೆ ಇದೇ ಕುಟುಂಬದಿಂದ ಸಮಾಜ ಸುಧಾರಣೆ ಆಗುತ್ತದೆ. ತಮ್ಮನ್ನು ತಾವು ಸಜ್ಜನರು ಎಂದು ತಿಳಿದುಕೊಳ್ಳುವವರು ಕೆಡುಕುಗಳನ್ನು ನೋಡಿಯೂ ನೋಡದ ಹಾಗೆ ಇದ್ದರೆ ತಮ್ಮ ಕೈಲಾದಷ್ಟು ಪಾಪ ಕಾರ್ಯಗಳನ್ನು ತಡೆಯದೆ ಇದ್ದರೆ ನಿಜವಾದ ಸಮಾಜಘಾತಕರಾಗುತ್ತಾರೆ. 15ನೇ ಶತಮಾನದಲ್ಲಿ ಕೊಡೆಕಲ್ ಬಸವಣ್ಣನವರು ಜಗತ್ತಿಗೆ ಸರಿಯಾದ ಮಾರ್ಗವನ್ನು ನೀಡಲು ಇವೆಲ್ಲ ಕೆಡುಕುಗಳ ವಿರುದ್ಧ ಅಸಮಾನತೆಯ ವಿರುದ್ಧ ಒಂದು ಸತ್ಯದ ಮಾರ್ಗವನ್ನು ತೋರಿಸಿ ಹೋಗಿದ್ದಾರೆ. ಅವರು ಕೇವಲ ವಚನಗಳಿಂದ ಹೇಳಿದ್ದಲ್ಲ ಬದಲಾಗಿ ನಡೆದು ತೋರಿಸಿದ್ದಾರೆ. ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಪ್ರಾಣವನ್ನು ವ್ಯಯಿಸಿದ ವೀರಯೋಧ ಹನುಮಂತಪ್ಪ ಕೊಪ್ಪದ್ ರವರ ಧರ್ಮಪತ್ನಿ ಹಾಗೂ ರಾಯಚೂರಿನಲ್ಲಿ ಸುಮಾರು ಹತ್ತು ಸಾವಿರಗಳಿಗಿಂತ ಹೆಚ್ಚು ಗಿಡಗಳನ್ನು ನೆಟ್ಟಿರುವಂತಹ ಪರಿಸರ ಪ್ರೇಮಿ ಶ್ರೀ ವೀರಣ್ಣ ಕೊಸ್ಗಿ ರವರಿಗೆ ವಿಶೇಷ ಸನ್ಮಾನವನ್ನು ಮಾಡಲಾಯಿತು.
ಮಹಲಿನಮಠದ ಬಸವ ಪೀಠಾಧಿಪತಿಗಳಾದಂತಹ ಪರಮಪೂಜ್ಯ ಶ್ರೀ ವೃಷಭೇಂದ್ರ ಅಪ್ಪನವರು ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದರು. ವಿರಕ್ತಮಠದ ಪರಮಪೂಜ್ಯ ಶ್ರೀ ನೀಲಕಂಠ ಸ್ವಾಮೀಜಿಗಳು ಹಾಗೂ ಆದಿಶಕ್ತಿ ಪೀಠ ಎಣ್ಣಿವಡಿಗೇರಿಯ ಪೀಠಾಧಿಪತಿಗಳಾಗಿರುವ ಶ್ರೀ ಶಿವಯ್ಯ ಸ್ವಾಮಿಗಳು ಸಾನಿಧ್ಯವನ್ನು ವಹಿಸಿಕೊಂಡಿದ್ದರು. ರಾಜ ಮನೆತನದ ರಾಣಿ ಶ್ರೀಮತಿ ರಂಗಮ್ಮ ಜಹಾಗಿರದಾರರು ಹಾಗೂ ವೆಂಕಟಪ್ಪನಾಯಕ ಜಹಾಗಿರದಾರರು ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ್ದರು ಮಾಜಿ ಸಚಿವರು ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವಂತಹ ಶ್ರೀಯುತ ನರಸಿಂಹ ನಾಯಕ (ರಾಜು ಗೌಡ) ಅಧ್ಯಕ್ಷೀಯ ನುಡಿಗಳನ್ನಾಡಿದರು. ಗಣ್ಯರಾದ ಬಸವರಾಜ ಬದ್ರಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಸಂಗಣ್ಣ ಪಂಜಗಲ್ ನಿರೂಪಿಸಿ ಒಂದಿಸಿದರು. ಅಪಾರ ಜನಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.


