ತಾಳಿಕೋಟಿ: ತಾಲೂಕಿನ ಕಲಕೇರಿ ಗ್ರಾಮದ ಪರಮ ಪೂಜ್ಯಶ್ರೀ ಷ.ಬ್ರ. ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 70ನೇ ಹುಟ್ಟುಹಬ್ಬದ ವರ್ಧಂತಿ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಧರ್ಮ ಸಭೆಯಲ್ಲಿ ಕೇದಾರ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ 1008 ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದಂಗಳವರ ಸಾನಿಧ್ಯದಲ್ಲಿ ನಾವದಗಿ ಬ್ರಹನ್ಮಠದ ಷ.ಬ್ರ. ಶ್ರೀ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರಿಗೆ ಕಾರ್ಯಕ್ರಮ ಸಮಿತಿಯ ವತಿಯಿಂದ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಈ ಸಮಯದಲ್ಲಿ ಹಲವಾರು ಪರಮ ಪೂಜ್ಯರು ರಾಜಕೀಯ ಮುಖಂಡರು ಗಣ್ಯರು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

