ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಅವರು, ಜೀವನಾಡಿ ತುಂಗಭದ್ರ ಕ್ರಸ್ಟ್ ಗೇಟ್ ಗಳ ಕುರಿತು, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಹಾಗೂ ಭತ್ತ ಅಭಿವೃದ್ಧಿ ಮಂಡಳಿಯನ್ನು ಸಿಂಧನೂರು ತಾಲ್ಲೂಕಿನಲ್ಲಿ ಸ್ಥಾಪನೆ ಮಾಡುವಂತೆ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ಒತ್ತಾಯಿಸಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸದನದ ಶೂನ್ಯದ ವೇಳೆಯಲ್ಲಿ ಪ್ರಸ್ತಾಪಿಸಿದ ಅವರು, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಭತ್ತ ಬೆಳೆಯುವ ರೈತರ ಬಲವರ್ಧನೆಯ ಹಿತದೃಷ್ಟಿಯಿಂದ ‘ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ’ ಹಾಗೂ ‘ಕಾಫಿ ಅಭಿವೃದ್ಧಿ ಮಂಡಳಿ’ಯ ರೀತಿಯಲ್ಲಿ ನಮ್ಮ ಸಿಂಧನೂರು ತಾಲೂಕಿನಲ್ಲಿಯೂ ಸಹ ರಾಜ್ಯ ಸರ್ಕಾರದಿಂದ ‘ಭತ್ತ ಅಭಿವೃದ್ಧಿ ಮಂಡಳಿ’ಯನ್ನು ಸ್ಥಾಪನೆ ಮಾಡುವಂತೆ ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ ಬೆಳಗಾವಿ ಚಳಿಗಾಲದ ಅಧಿವೇಶನ ಪ್ರಾರಂಭಗೊಂಡ ದಿನದಿಂದ ಎಂಎಲ್ಸಿ ಬಸನಗೌಡ ಬಾದರ್ಲಿಯವರು ಸಿಂಧನೂರು ತಾಲೂಕಿನ ಸಕಲ ಮೂಲಭೂತ ಸಮಸ್ಯೆಗಳ ಕುರಿತು, ವಿದ್ಯಾರ್ಥಿ ಯುವ ಜನತೆಯ ಕುರಿತು, ರೈತಾಪಿ ಜನರ ಕುರಿತು ವಿವಿಧ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸುತ್ತಿದ್ದು, ಎಂಎಲ್ಸಿ ಬಸನಗೌಡ ಬಾದರ್ಲಿ ಹೇಳಿದ್ದನ್ನ ಸರ್ಕಾರ ಎಷ್ಟರಮಟ್ಟಿಗೆ ಪರಿಗಣಿಸುತ್ತದೆ ಎನ್ನುವುದು ಕಾದು ನೋಡಬೇಕು.

