ತಾಳಿಕೋಟಿ: ಪಟ್ಟಣದ ಭರತನಾಟ್ಯ ಪ್ರವೀಣೆ, ನಾಟ್ಯ ಮಯೂರಿ ಕುಮಾರಿ ಪೃಥ್ವಿ ಎಂ.ಹೆಗಡೆ ಇವರಿಗೆ ಕರ್ನಾಟಕ ಸರ್ಕಾರ ಬಾಲ ವಿಕಾಸ ಅಕಾಡೆಮಿ ಧಾರವಾಡ ನೀಡುವ “ಬಾಲಗೌರವ” ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಡಿಸೆಂಬರ್ 16 ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸೇರಿ ಹಲವು ಗಣ್ಯರ ಸಮ್ಮುಖದಲ್ಲಿ 10ಸಾವಿರ ನಗದು, ಸ್ಮರಣಿಕೆ, ಬಾಲಗೌರವ ಪ್ರಶಸ್ತಿ ನೀಡಿ
ನಾಟ್ಯಮಯೂರಿ ಪೃಥ್ವಿ ಎಮ್ ಹೆಗಡೆ ಅವರಿಗೆ ಗೌರವಿಸಲಾಗಿದೆ.
10 ವರ್ಷದಿಂದ ತಾಳಿಕೋಟಿ ಪಟ್ಟಣದ ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆಯಲ್ಲಿ ವಿನೋದಕುಮಾರ ಚಿಕ್ಕಮಠ ಇವರ ಹತ್ತಿರ
ಭರತನಾಟ್ಯ ಹಾಗೂ ಜಾನಪದ ತರಬೇತಿ ಪಡೆದುಕೊಂಡು
ತಮ್ಮ ನೃತ್ಯದ ಮೂಲಕ ಜನರ‌ ಮನಸ್ಸು ಸೆಳೆದಿರುವ ವಿದ್ಯಾರ್ಥಿನಿ
ನಾಟ್ಯಮಯೂರಿ ಪೃಥ್ವಿ ಎಮ್ ಹೆಗಡೆ ಇವರು ಈಗಾಗಲೇ ರಾಷ್ಟ್ರೀಯ ಪ್ರಶಸ್ತಿ ಯನ್ನು ಪಡೆದುಕೊಂಡಿದ್ದಾರೆ.ಈ ನೃತ್ಯ ಕಲಾವಿದೆ ತಾಳಿಕೋಟಿ ನಿವಾಸಿ ಆಗಿದ್ದು
ಕರ್ನಾಟಕ. ಕೆರಳ . ಉತ್ತರಪ್ರದೇಶ. ಹಾಗೂ ಮಾಹಾರಾಷ್ಟ್ರ. ಆಂಧ್ರಪ್ರದೇಶ.ದಲ್ಲಿ ತಮ್ಮ ನೃತ್ಯ ಪ್ರದರ್ಶನ ನೀಡಿರುತ್ತಾರೆ ಮತ್ತು ‌ಚಂದನ ವಾಹಿನಿಯಲ್ಲಿ ಶ್ರೀ ಬಸವ ವಾಹಿನಿಯಲ್ಲಿ 231 ಭರತನಾಟ್ಯ ಹಾಗೂ ಜಾನಪದ ನೃತ್ಯ ಪ್ರದರ್ಶನ ನೀಡಿ ಹಾಗೂ ಹಲವಾರು ಉತ್ಸವದಲ್ಲಿ ಭಾಗವಹಿಸಿ
ರಾಜ್ಯ ಪ್ರಶಸ್ತಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ನಾಟ್ಯಮಯೂರಿ ಕುಮಾರಿ ಪೃಥ್ವಿ ಎಮ್.ಹೆಗಡೆ ಇವರು1000 ಕ್ಕೂಹೆಚ್ಚು ನೃತ್ಯ ಪ್ರದರ್ಶನ ನೀಡಿ ರಾಜ್ಯ ಹಾಗೂ ಹೊರ ರಾಜ್ಯಗಳ
ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಯನ್ನು ತಾಳಿಕೋಟಿಗೆ ತಂದು ಕೊಟ್ಟಿರುವ ವಿದ್ಯಾರ್ಥಿನಿಗೆ
ಈಗ ಕರ್ನಾಟಕ ಸರ್ಕಾರ ಬಾಲವಿಕಾಸ ಅಕಾಡೆಮಿ ಧಾರವಾಡ ನಿಡುವ ಬಾಲಗೌರವ ಪ್ರಶಸ್ತಿ ಲಭಿಸಿದೆ.
ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ (ರಿ) ತಾಳಿಕೋಟಿ ಅಧ್ಯಕ್ಷ ವಿನೋದಕುಮಾರ ಚಿಕ್ಕಮಠ ಹಾಗೂ ಎಲ್ಲಾ ಪದಾಧಿಕಾರಿಗಳು, ಸಮಸ್ತ ತಾಳಿಕೋಟಿ ಜನತೆ ಈ ವಿದ್ಯಾರ್ಥಿನಿಯ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *