ಬೆಂಗಳೂರು : SIO ಕರ್ನಾಟಕವು ಕಳೆದ 42 ವರ್ಷದಿಂದ ಸಮಾಜದ ಪುನರ್ ನಿರ್ಮಾಣಕ್ಕಾಗಿ ವಿದ್ಯಾರ್ಥಿ ಯುವಕರನ್ನು ಒಳ್ಳೆಯ ಮಾರ್ಗದರ್ಶನ ನೀಡುತ್ತಾ ಬಂದಿದೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯಗಳಿಗೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣಕ್ಕೆ ಪ್ರೋತ್ಸಾಹ ನೀಡುತ್ತಿದೆ ಆ ಕಲ್ಪನೆಯಲ್ಲಿ CERA ಜೊತೆಗಿನ ಸಹಯೋಗದಲ್ಲಿ ಕಲಿಕೆಯೇ ಕಲ್ಯಾಣ ಅಭಿಯಾನವನ್ನು ಡಾ. ಸಾದ್ ಬೆಲ್ಗಾಮಿ (ರಾಜ್ಯಾಧ್ಯಕ್ಷರು, JIH ಕರ್ನಾಟಕ) ಅವರ ಸಾನ್ನಿಧ್ಯದಲ್ಲಿ ರಾಜ್ಯ ಕಚೇರಿ ಜಯನಗರ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ SIO ರಾಜ್ಯಾಧ್ಯಕ್ಷರಾದ ಆದಿ ಅಲ್ ಹಸನ್ ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಜೋಹರ್ ಕಾಶಿಫ್, ಹಯ್ಯಾನ್, ಸುಫಿಯನ್ ಜೈನ್, ಆಸಿಫ್, ಅಬೂಬಕರ್ ಮತ್ತು ಅಶ್ಫಾಕ್ ಉಸ್ತಾದ್ ಅವರು ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಅಭಿಯಾನವು ಡಿಸೆಂಬರ್ 15, 2025 ರಿಂದ ಫೆಬ್ರವರಿ 15, 2026 ರವರೆಗೆ ನಡೆಯಲಿದೆ ಈ ಅಭಿಯಾನದ ಮುಖ್ಯಾಂಶ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೈಕ್ಷಣಿಕ ಉನ್ನತಿಗಾಗಿ ಬೀದಿ ಸಭೆಗಳು,ಶಾಲೆಗಳ ಭೇಟಿ,ಮಸೀದಿ ಸಭೆಗಳು,ವೃತ್ತಿ ಮಾರ್ಗದರ್ಶನ ತರಗತಿಗಳು,ಉದ್ದೇಶಿತ ಶೈಕ್ಷಣಿಕ ಬೆಂಬಲ,ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎದುರಿಸುವುದು ಹೇಗೆ? – ತರಗತಿಗಳು,ಜನ ಸಂಪರ್ಕ ಸಭೆಗಳು ದುಂಡು ಮೇಜಿನ ಸಭೆ / ವಿಚಾರ ಸಂಕಿರಣ ಹೀಗೆ ಕಾರ್ಯಕ್ರಮಗಳು ಸಿ.ಈ ಆರ್.ಎ ಇವರ ಸಹಯೋಗದೊಂದಿಗೆ ನಡೆಯಲಿವೆ ಕಲ್ಯಾಣ ಕರ್ನಾಟಕದ ಸರ್ವರು ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಎಸ್.ಐ. ಒ ವಿದ್ಯಾರ್ಥಿ ಸಂಘಟನೆಯ ರಾಜ್ಯ ಅಧ್ಯಕ್ಷ ಆದಿ ಅಲ್ ಹಸನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ


