ಬೆಳಗಾವಿ : ರಾಷ್ಟ್ರದ ಭದ್ರ ಬುನಾದಿ ಪ್ರಾಥಮಿಕ ಶಿಕ್ಷಣ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರಾದ ಸನ್ಮಾನ್ಯ ಶ್ರೀ ವಿಕಾಸ ಸುರಳ್ಳರ್ ಐಎಎಸ್ ಅವರನ್ನು ಭೇಟಿ ಮಾಡಿ, ಮುಖ್ಯ ಗುರುಗಳ ಹುದ್ದೆಯಿಂದ ಹಿರಿಯ ಮುಖ್ಯ ಗುರುಗಳ ಹುದ್ದೆಗೆ, ಬಿಪಿಎಡ್ ಮುಗಿಸಿರತಕ್ಕಂತಹ ದೈಹಿಕ ಶಿಕ್ಷಕರನ್ನ ಗ್ರೇಡ್ 1 ದೈಹಿಕ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು ಮನವಿ ಸಲ್ಲಿಸಲಾಯಿತು
ಮಾನ್ಯ ಆಯುಕ್ತರು, ಮಾನ್ಯ ನಿರ್ದೇಶಕರಾದ ಅನಿತಾ ನಜಾರೆರವರನ್ನು ಸುವರ್ಣಸೌಧದ ಅವರ ಕಚೇರಿಗೆ ಕರೆಸಿಕೊಂಡು ಬೆಳಗಾವಿ ಅಧಿವೇಶನ ಮುಗಿದ ಮೇಲೆ ವೇಳಾ ಪಟ್ಟಿಯನ್ನ ಹೊರಡಿಸಲು ನಿರ್ದೇಶನವನ್ನು ನೀಡಿದರು. ಇನ್ನುಳಿದಂತೆ ಎಲ್ಲಾ ರೀತಿಯ ಬಡ್ತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಪ್ರಾಥಮಿಕ ಹಂತದಿಂದ ಪ್ರೌಢ, ಪ್ರಾಥಮಿಕ ಹಂತದಿಂದ ಮುಖ್ಯ ಗುರುಗಳ ಹುದ್ದೆಗೆ ಬಡ್ತಿಯನ್ನು ಪ್ರಾರಂಭಿಸಲು ಕೂಡ ನಿರಂತರ ಪ್ರಯತ್ನವನ್ನು ಮಾಡುತ್ತೀವಿ ಎಂದು ತಿಳಿಸಿದರು

