ಸಿಂಧನೂರು : ಡಿ 17 ಬೆಳಿಗ್ಗೆ 10 : 30 ಕ್ಕೆ ನಗರದ ಮಿಲಾಪ ಶಾದಿ ಮಹಲ್‌ದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಹಾಗೂ ಪಿಂಚಣಿದಾರರ ಸಂಘ ತಾಲೂಕ ಘಟಕ ಹಾಗು ವೇದಿಕೆಯಿಂದ ನಿವೃತ್ತ ಹಾಗೂ ಪಿಂಚಣಿ ನೌಕರರ ದಿನಾಚರಣೆ ಹಾಗೂ ೭೫ ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿದೆ ಯೆಂದು ಅಧ್ಯಕ್ಷ ಟಿ.ಅಯ್ಯಪ್ಪ ತಿಳಿಸಿದ್ದಾರೆ. ಶಾಸಕ ಹಂಪನಗೌಡ ಬಾದರ್ಲಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಅಧ್ಯಕ್ಷತೆಯನ್ನು  ಕರ್ನಾಟಕ ರಾಜ್ಯ ನಿವೃತ್ತ ಹಾಗೂ ಪಿಂಚಣಿದಾರರ ಸಂಘದ ಅಧ್ಯಕ್ಷ ಟಿ.ಅಯ್ಯಪ್ಪ ವಹಿಸುವರು ಎಮ್.ಎಲ್.ಸಿ. ಬಸನಗೌಡ ಬಾದರ್ಲಿ, ಮಾಜಿ ಸಚಿವ ಕೆ.ಓ.ಎಫ್.ಅಧ್ಯಕ್ಷ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಮಿಲಾಪ್ ಶಾದಿಮಹಲ್ ಅಧ್ಯಕ್ಷ ಕೆ. ಜಿಲಾನಿ ಪಾಷಾ, ತಹಶೀಲ್ದಾರ ಅರುಣಕುಮಾರ ದೇಸಾಯಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರoಗ ಇಟಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಹುಡೇದ,.ಉಪಖಜಾನೆ ಅಧಿಕಾರಿ ನಾಗರಾಜ್, ಡಿವೈಎಸ್‌ಪಿ ಚಂದ್ರಶೇಖರ ನಾಯಕ, ಎಸ್.ಬಿ.ಐ. ಮುಖ್ಯ ಶಾಖೆಯ ಮುಖ್ಯ ವ್ಯವಸ್ಥಾಪಕ, ಅಮೂಲ್ ಲೋಕಡಾ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಜೆ.ಬಾಬುರಾವ ಹಾಗೂ ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಂಕರಗೌಡ ಎಸ್. ಪಾಟೀಲ್ ಮುಖ್ಯ ಅತಿಥಗಳಾಗಿ ಭಾಗವಹಿಸುವರು ನಿವೃತ್ತ ನೌಕರರ ಸಂಘದ ಸರ್ವ ಸದಸ್ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಪ್ರಚಾರ ಸಮಿತಿ ಸಂಚಾಲಕರಾದ ಬೀರಪ್ಪ ಶಂಭೋಜಿ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *