ಮಸ್ಕಿ: ಪುರಸಭೆಗೆ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಸುರೇಶ ಹರಸೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಹಸೀಲ್ದಾರ್ ಹಾಗೂ ಚುನಾವಣೆ ಅಧಿಕಾರಿಯಾದ ಮಂಜುನಾಥ ಭೋಗಾವತಿ ಸೋಮವಾರ ತಿಳಿಸಿದರು.
ಮಸ್ಕಿ ಪುರಸಭೆ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಮಸ್ಕಿ ಪುರಸಭೆ ಅಧ್ಯಕ್ಷರಾಗಿದ್ದ ಮಲ್ಲಯ್ಯ ಅಂಬಾಡಿ ಕೆಲ ದಿನಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 16ನೇ ವಾರ್ಡಿನ ಸದಸ್ಯ ಸುರೇಶ ಹರಸೂರು ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದರು.
ವಿಜಯೋತ್ಸವ: ಪುರಸಭೆಗೆ ನೂತನ ಅಧ್ಯಕ್ಷರಾಗಿ ಸುರೇಶ ಹರಸೂರು ಘೊಷಣೆಯಾಗುತ್ತಿದ್ದಂತೆ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವವನ್ನು ಆದ್ಧೂರಿಯಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರವಿಗೌಡ ಪೊಲೀಸ್ ಪಾಟೀಲ್ , ಚೇತನ ಪಾಟೀಲ್, ಮಲ್ಲಿಕಾರ್ಜುನ ಬ್ಯಾಳಿ, ಭರತ, ಸೇರಿದಂತೆ ಇನ್ನಿತರ ಪುರಸಭೆ ಸದಸ್ಯರು ಹಾಗೂ ಮುಖಂಡರಾದ ಸಿದ್ದಣ್ಣ ಹೂವಿನಭಾವಿ, ಬಿ.ಹೆಚ್.ದಿವಟರ್, ಮೌನೇಶ ನಾಯಕ, ಸೂಗಣ್ಣ ಬಾಳೆಕಾಯಿ, ಪ್ರಸನ್ನ ಪಾಟೀಲ್, ಬಸವರಾಜ ಬುಕ್ಕಣ್ಣ, ಮಸೂದ್‌ಪಾಷ, ಯಲ್ಲೋಜಿರಾವ್ ಕೋರೆಕಾರ್ ಸೇರಿದಂತೆ ಪುರಸಭೆ ಸದಸ್ಯರು ಮತ್ತು ಬಿಜೆಪಿ ಪಕ್ಷದ ನೂರಾರು ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *