ಕವಿತಾಳ : `ಮಕ್ಕಳ ಪ್ರತಿಭೆ ಅನಾವರಣ ಮತ್ತು ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉತ್ತಮ ವೇದಿಕೆಯಾಗಿದೆ’ ಎಂದು ಮಸ್ಕಿ ಶಾಸಕ ಆರ್. ಬಸನಗೌಡ ತುರವಿಹಾಳ ಹೇಳಿದರು.
ಅವರು ಇಂದು ಸಮೀಪದ ಹಾಲಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಲಯ ಮಟ್ಟದಪ್ರತಿಭಾ ಕಾರಂಜಿ ಹಾಗೂ ಕಲೋತ್ಸವನ್ನು ಉದ್ಘಾಟಿಸಿ ಮಾತನಾಡಿದರು.
`ಪ್ರತಿಭಾ ಕಾರಂಜಿಯು ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಒಂದು ಉತ್ತಮ ಅವಕಾಶ, ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಳುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು’ ಎಂದು ಹೇಳಿದರು.
ಚಿತ್ರಕಲೆ, ಮಿಮಿಕ್ರಿ, ರಸಪ್ರಶ್ನೆ, ರಂಗೋಲಿ ಬಿಡಿಸುವುದು, ಭರತನಾಟ್ಯ, ಪ್ರಬಂದ,ದೇಶಭಕ್ತಿಗೀತೆ, ಛದ್ಮವೇಶ,ಭರತನಾಟ್ಯ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿದುವ ಮೂಲಕ ಮಕ್ಕಳು ಸಂಭ್ರಮಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಜಂಗಮರಹಳ್ಳಿಯ ಚಂದ್ರಮೌಳೇಶ್ವರ ತಾತ ಮತ್ತು ದಂಡಗುಂಡಪ್ಪ ತಾತನವರು ವಹಿಸಿದ್ದರು.
ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಜಗಧೀಶ್ಚಂದ್ರ ಸ್ವಾಮಿ, ಮಂಜುನಾಥಪಾಟೀಲ್, ಚನ್ನವೀರಜೋಗಿನ್, ಅರವಿಂದ ಪಾಟೀಲ್, ವೆಂಕಟರಡ್ಡಿಗೌಡ, ಬಲವಂತರಾಯ ವಟಗಲ್ ಮತ್ತಿತರರು ಉಪಸ್ಥಿತರಿದ್ದರು.

