ಮಸ್ಕಿ: ಬಳಗಾನೂರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಭೇಡಿಕೆಗಳನ್ನು ಈಡೇರಿಸಲು ಕರ್ನಾಟಕ ರೈತ ಸಂಘದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಸೋಮವಾರ ಮನವಿ ಪತ್ರ ಸಲ್ಲಿಸಲುವ ಮೂಲಕ ಒತ್ತಾಯಿಸಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂದುಗಡೆ ಪ್ರತಿಭಟನೆ ನಡೆಸಿದರು. ನಂತರ ತಾಲೂಕಾಧ್ಯಕ್ಷ ಸಂತೋಷ ಹಿರೇದಿನ್ನಿ ಮಾತನಾಡಿ ಬಸವೇಶ್ವರ ನಗರದ ಸರ್ವೆ ನಂ. 509, ರಲ್ಲಿ ಜನ ವಸತಿಗಾಗಿ ಭೂಮಿಯನ್ನು ಖರೀಸಿದಿಲಾಗಿದೆ. ಇದರಲ್ಲಿ ವ್ಯಕ್ತಿಗಳು 5 ಅಡಿ ರಸ್ತೆಯನ್ನು ಬಂದ್ ಮಾಡಿದ್ದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗಿದ್ದರಿಂದ ಕೂಡಲೇ ತೆರವುಗೊಳಿಸಬೇಕು. ಸದರಿ ಸ್ಥಳದಲ್ಲಿ ಅಂಬೇಡ್ಕರ್ ಭವನ ಮತ್ತು ಸಾರ್ವಜನಿಕರಿಗೆ ಹೈಟೆಕ್ ಶೌಚಾಲಯವನ್ನು ನಿರ್ಮಾನಿಸಬೇಕೆಂದು ಆಗ್ರಹಿಸಿದರು.
ಬಸವೇಶ್ವರ ನಗರದ ಜನರಿಗೆ ಮೂಲಭೂತ ಸೌಲಭ್ಯಗಳಿಲ್ಲದೇ ಅಲೆದಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದರು.
ಭೇಡಿಕೆಗಳು: ಸ.ನಂ. 509/23 5 ಅಡಿ ರಸ್ತೆ ಬಂದ್ ಮಾಡಲಾಗಿದ್ದು ಕೂಡಲೇ ತೆರವುಗೊಳಿಸಬೇಕು, ಅಂಬೇಡ್ಕರ್ ಭವನವನ್ನು ನಿರ್ಮಿಸಬೇಕು, ಸಾರ್ವಜನಿಕರಿಗೆ ಹೈಟೆಕ್ ಶೌಚಾಲಯವನ್ನು ನಿರ್ಮಿಸಬೇಕು, ಅಕ್ರಮ ಮರಳು ಗಣಿಗಾರಿಕೆ ಸಂಪೂರ್ಣ ನಿಲ್ಲಿಸಬೇಕು, ನಾರಾಯಣ ನಗರ ಕ್ಯಾಂಪ್, ಲಕ್ಷ್ಮಿ ಕ್ಯಾಂಪ್ ಮತ್ತು ಬಸವೇಶ್ವರ ನಗರ (ಕ್ರಾಸ್) ಮನೆಗಳನ್ನು ಡಿಮ್ಯಾಂಡ್ ಪಟ್ಟಿಯಲ್ಲಿ ಸೇರಿಸಿ ಸಮಗ್ರ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಂ.ಗಂಗಾಧರ , ವೆಂಕಟೇಶ ನಾಯಕ, ಮಾರುತಿ ಜಿನ್ನಾಪುರ, ಬಸವರಾಜ ಬಳಗಾನೂರ, ಹುಲುಗಪ್ಪ, ಶಾಂತಮೂರ್ತಿ, ಮರಿಯಪ್ಪ, ದುರುಗಪ್ಪ, ಶರಣಪ್ಪ, ಶಿವಪ್ಪ ಹನುಮಂತ, ಹುಚಪ್ಪ, ಯಂಕಪ್ಪ ಸೇರಿದಂತೆ ಇನ್ನಿತರರಿದ್ದರು.

