ಸಿಂಧನೂರು: ತುರ್ವಿಹಾಳ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರ ಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಅಶೋಕ್ ಪ್ರಕಟಣೆಯಲ್ಲಿ ತಿಳಿಸಿದರು.
ಉಮಲೂಟಿ ಗ್ರಾಮ ಪಂಚಾಯತ್
ವ್ಯಾಪ್ತಿಯಲ್ಲಿ ಬರುವ ಬುಕ್ಕನಹಟ್ಟಿ -2 ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ 01 ಹುದ್ದೆ ಮೀಸಲಾತಿ ಇತರೆ ಇದ್ದು ಮತ್ತು ಗೊರಲೋಟಿ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ 01 ಹುದ್ದೆ ಮೀಸಲಾತಿ ಪರಿಶಿಷ್ಟ ಪಂಗಡ ಇದ್ದು ಹಾಗೂ ಬುಕ್ಕನಹಟ್ಟಿ -1 ಅಂಗನವಾಡಿ
ಕೇಂದ್ರದ ಅಂಗನವಾಡಿ ಸಹಾಯಕಿ 01 ಹುದ್ದೆ ಮೀಸಲಾತಿ ಪರಿಶಿಷ್ಟ ಜಾತಿ ಇದ್ದು ಹಾಗೂ ಮುದೇನೂರು ಕ್ಯಾಂಪ್ ಅಂಗನವಾಡಿ ಕೇಂದ್ರದ ಅಂಗನವಾಡಿ ಸಹಾಯಕಿ 01 ಹುದ್ದೆ ಮೀಸಲಾತಿ ಪರಿಶಿಷ್ಟ ಪಂಗಡ ಇದ್ದು
ತಿಡಿಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ (ಕುರುಕುಂದ) ಗುಡದಮ್ಮ ಕ್ಯಾಂಪ್ ಕೇಂದ್ರದ ಅಂಗನವಾಡಿ ಸಹಾಯಕಿ 01 ಹುದ್ದೆಗೆ ಮೀಸಲಾತಿ ಪ.ಜಾತಿ ಇದ್ದು. ಮತ್ತು ನೀಡಿಗೋಳ ಕೇಂದ್ರದ ಅಂಗನವಾಡಿ ಸಹಾಯಕಿ 01 ಹುದ್ದೆಗೆ ಮೀಸಲಾತಿ ಇತರೆ ಇದ್ದು.
ಗುಂಜಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗುಂಜಳ್ಳಿ -1 ಕೇಂದ್ರದ ಅಂಗನವಾಡಿ ಸಹಾಯಕಿ 01 ಹುದ್ದೆ ಮೀಸಲಾತಿ ಇತರೆ.
ಬೂತಲದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಗ್ಗಿನ ಕ್ಯಾಂಪ್
ಕೇಂದ್ರದ ಅಂಗನವಾಡಿ ಸಹಾಯಕಿ 01 ಹುದ್ದೆ ಮೀಸಲಾತಿ ಇತರೆ ಇದ್ದು.
ಜಾಲಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೆ ಹಂಚಿನಾಳ – 1 ಕೇಂದ್ರದ ಅಂಗನವಾಡಿ ಸಹಾಯಕಿ 01 ಹುದ್ದೆ ಮೀಸಲಾತಿ ಪರಿಶಿಷ್ಟ ಜಾತಿ ಇದ್ದು.
ಗುಡದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮೆರನಾಳ -1
ಕೇಂದ್ರದ ಅಂಗನವಾಡಿ ಸಹಾಯಕಿ 01 ಹುದ್ದೆ ಮೀಸಲಾತಿ ಇತರೆ ಹಾಗೂ ಗೋನಾಳ್ -1
ಕೇಂದ್ರದ ಅಂಗನವಾಡಿ ಸಹಾಯಕಿ 01 ಹುದ್ದೆ ಮೀಸಲಾತಿ ಇತರೆ.
ಗೊರೇಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೆ ಹಂಚಿನಾಳ ಕ್ಯಾಂಪ್ -6 ಕೇಂದ್ರದ ಅಂಗನವಾಡಿ ಸಹಾಯಕಿ 01 ಹುದ್ದೆ ಮೀಸಲಾತಿ ಇತರೆ.
ಗುಂಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗುಂಡ -1 ಕೇಂದ್ರದ ಅಂಗನವಾಡಿ ಸಹಾಯಕಿ 01 ಹುದ್ದೆ ಮೀಸಲಾತಿ ಪರಿಶಿಷ್ಟ ಜಾತಿ ಮತ್ತು ಗುಂಡ -3 ಕೇಂದ್ರದ ಅಂಗನವಾಡಿ ಸಹಾಯಕಿ 01 ಹುದ್ದೆ ಮೀಸಲಾತಿ ಇತರೆ ಮತ್ತು ಬೋಗಾಪೂರ ಕ್ಯಾಂಪ್ ಕೇಂದ್ರದ ಅಂಗನವಾಡಿ ಸಹಾಯಕಿ 01 ಹುದ್ದೆ ಮೀಸಲಾತಿ ಪರಿಶಿಷ್ಟ ಪಂಗಡ ಇದ್ದು.
ತುರ್ವಿಹಾಳ ಶಿಶು ಅಭಿವೃದ್ಧಿ ಯೋಜನೆ ಯಡಿ ಅಂಗನವಾಡಿ ಕೇಂದ್ರಗಳಲ್ಲಿರುವ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ,ಸಹಾಯಕಿಯರ ಹುದ್ದೆಗಳಿಗೆ ಆನ್ ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು 08-12- 2025 ರಿಂದ 07-01-2026 ರವರೆಗೆ ಕಾಲಾವಕಾಶ ನೀಡಲಾಗಿದೆ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿಯೋಜನಾಧಿಕಾರಿಗಳ ಕಛೇರಿ ಸಂಪರ್ಕಿಸಿ ಎಂದು ತಿಳಿಸಿದರು.
