ಸಿಂಧನೂರು: ರಾಯಚೂರು ಜಿಲ್ಲೆಯಲ್ಲಿ ಎಲ್ಲಾ ರಂಗಗಳಲ್ಲೂ ಮುಂದುವರೆದಿರುವ ತಾಲೂಕು ಎನ್ನುವ ಹೆಗ್ಗಳಿಕೆಯನ್ನು ಸಿಂಧನೂರು ತಾಲೂಕು
ಹೊಂದಿದೆ.
ಆದರೆ ಶೈಕ್ಷಣಿಕವಾಗಿ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ತಾಲೂಕಿಗೆ ಸರ್ಕಾರಿ ಬಿ.ಇಡಿ ಕಾಲೇಜು ಮತ್ತು ಸರ್ಕಾರಿ ಕಾನೂನು ಮಹಾವಿದ್ಯಾಲಯದ ಅವಶ್ಯ ಮತ್ತು ಈ ಭಾಗದ ಅಸಂಖ್ಯಾತ ವಿದ್ಯಾರ್ಥಿಗಳ ಬಹುದೊಡ್ಡ ಬೇಡಿಕೆಯಾಗಿದೆ. ಈ ಎರಡು ಕಾಲೇಜುಗಳನ್ನು ನಮ್ಮ ತಾಲೂಕಿಗೆ ಸರ್ಕಾರದಿಂದ ಮಂಜೂರು ಮಾಡಿಸಿದರೆ ವಿದ್ಯಾರ್ಥಿಗಳು ಬೇರೊಂದು ತಾಲೂಕು ಅಥವಾ ಜಿಲ್ಲೆಗಳಿಗೆ ವಿದ್ಯಾಭ್ಯಾಸಕ್ಕಾಗಿ ವಲಸೆ ಹೋಗುವ ಅವಶ್ಯಕತೆ ಇರುವುದಿಲ್ಲ. ಆದ್ದರಿಂದಾಗಿ ನಮ್ಮ ತಾಲೂಕಿಗೆ ಈ ಎರಡು ಕಾಲೇಜುಗಳನ್ನು ಮಂಜೂರು ಮಾಡಿಸಲು ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನದಲ್ಲಿ ಧ್ವನಿ ಎತ್ತಿ, ನಮ್ಮ ಭಾಗದ ಸಹಸ್ರ ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸ
ಬೇಕು ಎಂದು ಸಿಂಧನೂರು
ದಲಿತ ವಿದ್ಯಾರ್ಥಿ ಪರಿಷತ್
ತಾಲೂಕು ಅಧ್ಯಕ್ಷ
ದುರ್ಗೇಶ ಕಲಮಂಗಿ ಒತ್ತಾಯಿಸಿದರು.
