ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಹಸಿಲ್ದಾರರ ಮಾರ್ಗದರ್ಶನದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಪ್ರಿಯಾಂಕರವರ ನೇತೃತ್ವದಲ್ಲಿ ಸಿಂಧನೂರು ನಗರದ ವಿವಿಧ ಕಿರಾಣಿ ಅಂಗಡಿಗಳಿಗೆ ಬೇಟಿ ನೀಡಿ ತಂಬಾಕು ಉತ್ಪನ್ನಗಳ ದಾಸ್ತಾನು, ಮಾರಾಟ, ಪರವಾನಿಗೆ ಪತ್ರಗಳನ್ನು ಪರಿಶೀಲಿಸಿ ಕೋಟ್ಪಾ ಕಾಯ್ದೆ ಉಲ್ಲಂಘಿಸಿದ ಒಟ್ಟು 12 ಅಂಗಡಿಗಳಿಗೆ ವಿವಿಧ ಸೆಕ್ಷನ್ ಅಡಿ 34 ಕೇಸ್ ದಾಖಲಿಸಿ ರೂಪಾಯಿ 8400 ಗಳನ್ನು ದಂಡವಾಗಿ ವಿಧಿಸಿದರು.
ವರ್ತಕರು ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಕಿರಾಣಿ ಅಂಗಡಿಗಳಲ್ಲಿ ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ, ಸುರೇಶ್ ಬಾಬು ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಪೊಲೀಸ್ ಕಾನಸ್ಟೇಬಲ್ ಮಲ್ಲಿಕಾರ್ಜುನ ಹಾಗೂ ಇತರರು ಉಪಸ್ಥಿತರಿದ್ದರು.

