ಕವಿತಾಳ:
ಪಟ್ಟಣ ಸಮೀಪದ ನವಲಕಲ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಸಲ್ಲಿಸುತ್ತಿರುವ ಶಿಕ್ಷಕ
ಬಸವರಾಜ ಪಲಕನಮರಡಿ ಅವರಿಗೆ ಬೆಳಕು ಸಂಭ್ರಮ ಸಮಿತಿ ವತಿಯಿಂದ ರಾಷ್ಟç ಮಟ್ಟದ ಉತ್ತಮ ಶಿಕ್ಷಕ
ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.`ಇವರು ಮಾನ್ವಿ ತಾಲ್ಲೂಕಿನಲ್ಲಿ ಮೂವತ್ತು ವರ್ಷಗಳಕಾಲ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದು 5 ವರ್ಷ ಪಾಮನಕಲ್ಲುರು ವಲಯದ ಸಂಪನ್ಮೂಲ ವ್ಯಕ್ತಿಯಾಗಿ, ಕವಿತಾಳ ವಲಯದಲ್ಲಿ 5 ವರ್ಷಗಳಕಾಲ,
ಸಿವರಾರ ಹಾಗೂ ಕವಿತಾಳ ಪದವಿ ಪೂರ್ವ ಕಾಲೇಜಿನಲ್ಲಿ 9 ವರ್ಷಗಳ ಕಾಲ ಉಪನ್ಯಾಸಕರಾಗಿ, ಮತು ದೇವದುರ್ಗ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂರು ವರ್ಷ ಎಂಟು ತಿಂಗಳು ಉಪನ್ಯಾಸಕರಾಗಿ ಸೆವೆ ಸಲ್ಲಿಸಿರುವ ಇವರು ಜಿಲ್ಲಾ ಹಂತದಲ್ಲಿ, ತಾಲ್ಲೂಕ ಹಂತದಲ್ಲಿ 15 ವರ್ಷಗಳಿಂದ ತರಬೇತಿಯನ್ನು ನೀಡುತ್ತಾ ಬಂದಿದ್ದು ಇವರ ಸೇವೆಯನ್ನು ಗುರುತಿಸಿ ಬೆಳಕು ಸಂಸ್ಥೆ ವತಿಯಿಂದ ರಾಷ್ಟ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಗಿದೆ & #39; ಎಂದು ಬೆಳಕು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ತಿಳಿಸಿದ್ದಾರೆ.

