ಸಿಂಧನೂರು ನ.5

ಸಿಂಧನೂರಿನ ಆರ್.ಜಿ.ಕಲಾ ಟ್ರಸ್ಟ್ ವತಿಯಿಂದ ನವೆಂಬರ್ 5 ಗುರುವಾರದಂದು ನಗರದ ಅಂಬಾ ಭವಾನಿ ದೇವಸ್ಥಾನದ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಂಗೀತ ಗಾಯನ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವಿಸಿ ಸನ್ಮಾನ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಸುಮಾರು 40 ಜನ ಹವ್ಯಾಸಿ ಗಾಯಕರಿಂದ ಸಂಗೀತ ಗಾಯನ ಹಾಗೂ ಧ್ವನಿ ಸುರುಳಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಆರ್.ಜ.ಕಲಾ ಟ್ರಸ್ಟ್ ವೀರೇಶ ದೇವರಮನಿ, ಮುಖಂಡ ಶಿವನಗೌಡ ನಾಯಕ, ರಂಗಮ್ಮ ಗಲಗ ಮಾತನಾಡಿದರು

ಮುಖ್ಯ ಅತಿಥಿಗಳಾಗಿ ಕಾರುಣ್ಯಾಶ್ರಮದ ಡಾ.ಚನ್ನಬಸವಯ್ಯಸ್ವಾಮಿ, ಸಿದ್ರಾಮೇಶ ಮನ್ನಾಪೂರು,
ವೀರೇಶ ಭಾವಿಮನಿ, ಮಂಜುನಾಥ ಗಾಣಿಗೇರ, ಡಿ.ಎಚ್.ಕಂಬಳಿ, ಸೇರಿದಂತೆ ಮುಂತಾದ ಗಣ್ಯವಕ್ತಿಗಳು ವೇದಿಕೆ ಮೇಲಿದ್ದರು.

ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ವೀರೇಶ ಭಾವಿಮನಿ, ಲಕ್ಷ್ಮಿ ಪತ್ತಾರ್, ಹುಸೇನಪ್ಪ ಪೂಜಾರಿ, ಮಹೇಶ, ಅಮರೇಶ, ಈಶ್ವರ್, ಸೇರಿದಂತೆ ಅನೇಕ ಗಾಯಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *