ಆರ್.ಎಸ್. ಪಾಟೀಲ ಕೂಚಬಾಳ ಅವರ 54ನೇ ಜನ್ಮದಿನದ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮಗಳು
ತಾಳಿಕೋಟಿ: ವಿಜಯಪುರ ಜಿಲ್ಲೆಯ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಜನನಾಯಕ ಆರ್.ಎಸ್. ಪಾಟೀಲ ಕೂಚಬಾಳ ಅವರ 54ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳ ವತಿಯಿಂದ ವಿವಿಧ ಸಾಮಾಜಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಈ ಪ್ರಯುಕ್ತ ಇಂದು ಬೆಳಿಗ್ಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಗೋದಾನ, ಮೇವು ದಾನ ಹಾಗೂ ಸಂಕಲ್ಪ ಸೇವೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಸನಗೌಡ ಮಾಲಿಪಾಟೀಲ, ನಾಗರಾಜ ಬಳಗಾರ, ಕಿಶೋರ್ ಬಡಿಗೇರ, ಕಾಶಿನಾಥ ಗಾಯಕವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಂಗಳೂರಿನ ನಾಗರಬಾವಿಯ ಶ್ರೀ ಸರಸ್ವತಿ ಅನಾಥ ಬಾಲ ಆಶ್ರಮದಲ್ಲಿ ಮಕ್ಕಳಿಗೆ ಉಪಾಹಾರ ವಿತರಿಸುವ ಮೂಲಕ ಸೇವೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅನಿಲ ಕಳಸನ್ನವರ, ಪ್ರಕಾಶ ಪಾಟೀಲ, ಶಿವರಾಜ್ ಬಿರಾದಾರ, ಭೀಮನಗೌಡ ಟಕ್ಕಳಕಿ, ಮುತ್ತು ಟಕ್ಕಳಕಿ ಸೇರಿದಂತೆ ಅಭಿಮಾನಿಗಳು ಉಪಸ್ಥಿತರಿದ್ದರು.
ಅದೇ ರೀತಿ ಶ್ರೀ ಸಂಕಲ್ಪ ಅನಾಥ ಸೇವಾ ನಿರಾಶ್ರಿತರ ಆಶ್ರಮ ಹಾಗೂ ಯಾದಗಿರಿ ಆಶ್ರಮದಲ್ಲಿ ಪ್ರಸಾದ ಸೇವೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶರಣಗೌಡ ಪಾಟೀಲ ಕನ್ಯಾಕೋಳೂರು, ಮಲ್ಲನಗೌಡ ಪಾಟೀಲ, ಶಿವಾಜಿ ಶಹಾಪುರ, ಸಂತೋಷ ಗಾಯಕವಾಡ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮಸ್ಕಿಯ ಅಭಿನಂದನ ಸ್ಪೂರ್ತಿಧಾಮದಲ್ಲಿ ಒಂದು ದಿನದ ದಾಸೋಹ ಸೇವೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಸನಗೌಡ ಮಾಲಿಪಾಟೀಲ, ನಾಗರಾಜ ಬಳಗಾರ, ಕಿಶೋರ್ ಬಡಿಗೇರ, ಕಾಶಿನಾಥ ಗಾಯಕವಾಡ, ಸಂತೋಷ ಗಾಯಕವಾಡ, ಮುನ್ನಾ ಠಾಕೂರು, ಶಿವು ದಡ್ಡಿ ಸೇರಿದಂತೆ ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.

