ತಾಳಿಕೋಟಿ : ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕು, ಉನ್ನತ ಶ್ರೇಣಿಯನ್ನು ಪಡದು ಅಂದುಕೊಂಡಿದ್ದನ್ನು ಸಾಧಿಸಬೇಕು ಎನ್ನುವುದು ಎಲ್ಲಾ ವಿದ್ಯಾರ್ಥಿಗಳ ಆಸೆಯಾಗಿರುತ್ತದೆ. ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವ ಕ್ರಮ ಬಹಳ ಮುಖ್ಯವಾಗಿರುತ್ತದೆ ಎಂದು ಎಸ್.ಬಿ.ವಿಸ್ಟಮ್ ಕ-ರಿಯರ ಅಕಾಡೆಮಿ ಅಧ್ಯಕ್ಷರಾದ ಎಸ್.ಬಿ.ಬಂಡಾರಿಮಠ ಅವರು ಹೇಳಿದರು.ತಾಲೂಕಿನ ಹಿರೂರ
ಗ್ರಾಮದ ಕೆಜಿವಿಎ ಸಂಘದ ಮಾತೋಶ್ರೀಕಾಂತಮ್ಮಸಂಗನಗೌಡ ಪಾಟೀಲ(ಸಾಸನೂರ) ಬಿಇಡಿ ಶಿಕ್ಷಣ ಮಹಾ ವಿದ್ಯಾಲಯದ ದಿ.ಬಿ.ಎಸ್.ಪಾಟೀಲ(ಸಾಸನೂರ) ವೇದಿಕೆಯಲ್ಲಿ ಕಾಲೇಜಿನ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಎಸ್.ಬಿ.ವಿಸ್ಟಮ್ ಕರಿಯರ ಅಕಾಡೆಮಿ ಮತ್ತು ಕೆಜಿವಿಎ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ජින්නයි ಮತ್ತು ಸಿಟಿಇಟಿ ಪರಿಕ್ಷೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಒಂದಿಷ್ಟೂ ವಿದ್ಯಾರ್ಥಿಗಳಿಗೆ ಎಷ್ಟೇ ಓದಿದರೂ ತಲೆಗೇ ಹತ್ತುವುದಿಲ್ಲ ಎನ್ನುವ ಕೊರಗು ಕಾಡುತ್ತಿರುತ್ತದೆ. ಇದಕ್ಕೆ ಮುಖ್ಯಕಾರಣ ಏಕಾಗ್ರತೆ ಕೊರತೆ ಎನ್ನಲಾಗುತ್ತದೆ. ಪ್ರಶಿಕ್ಷಣಾರ್ಥಿಗಳು ಕಷ್ಟಪಟ್ಟು ಓದುವ ಬದಲು ಕೆಲವು ವಿಧಾನಗಳನ್ನು ಅನುಸರಿಸಿಕೊಂಡು ಓದಿದರೆ ಉತ್ತಮ ಫಲಿತಾಂಶ ಪಡೆಯಲು ತುಲು ನೆರವಾಗುತ್ತದೆ.
ದೀರ್ಘಕಾಲ ಕೊಂಚವೂ ವಿಶ್ರಾಂತಿ ಇಲ್ಲದೇಗಂಟೆಗಳ ಕಾಲ ಅಧ್ಯಯನ ಮಾಡುವುದು ಅಷ್ಟು ಒಳ್ಳೆಯದಲ್ಲ. ಇದು ಏಕಾಗ್ರತೆಗೆ ಹಾನಿಯನ್ನುಂಟು ಮಾಡುವ ಚಾನ್ಸ್ ಜಾಸ್ತಿ ಇರುತ್ತದೆ. ಇದ-ರಿಂದ ನೆನಪಿನ ಶಕ್ತಿ ಕುಂದುತ್ತದೆ. ಹೀಗಾಗಿ ಪ್ರತಿ ಗಂಟೆಗೊಮ್ಮೆ ಕೆಲ ಕಾಲ ವಿರಾಮ ತೆಗೆದುಕೊಳ್ಳುವುದು ಉತ್ತಮವೆಂದ ಅವರುಗುರುಗಳಿಂದ ಮಾರ್ಗದರ್ಶನ ಪಡೆದು ಮುಂದೆ ನೀವು ಕೂಡಾ ಗುರುವಿನ ಸ್ಥಾನಮಾನ ಹೊಂದುವರಾಗಿದ್ದಿರಿ ಸ್ಪರ್ದಾತ್ಮಕ ಪರಿಕ್ಷೆಗಳು ಇಂದಿನ ಜೀವನಘಟ್ಟಕ್ಕೆ ಅತೀಮುಖ್ಯವಾಗಿದೆ ಅಧ್ಯಯನ ಏಕಾಗ್ರತಿಯೊಂದಿಗೆ ಕೂಡಿರಲಿ ಎಂದು ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಕರಾದಮಶಾಕಗೌಂಡಿ ಅವರು ಮಾತನಾಡಿ ಪ್ರಶಿಕ್ಷಣಾರ್ಥಿಗಳಿಗೆ ನಿರಂತರ ಅಧ್ಯಯನವೆಂಬುದು ಬೇಕು ವಿಷಯಕ್ಕ ತಕ್ಕ ಹಾಗೆ ಸಮಯಾವಕಾಶ ಕೊಡಿ ದಿನಕ್ಕೆ ಒಂದೇ ವಿಷಯವನ್ನು ಓದುವ ಬದಲುಹೆಚ್ಚುಹೆಚ್ಚುಪುನರಾವರ್ತನೆ ಮಾಡಕೊಳ್ಳಿ. ನಿಮ್ಮ ಪುನರಾವರ್ತನೆ ಯೋಜನೆಯಲ್ಲಿ ಪ್ರತಿಯೊಂದು ವಿಷಯವು ದೃಢವಾಗಿಒಳಗೊಂಡಿದೆ ಎನ್ನುವುದನ್ನಖಚಿತ ಪಡಿಸಿಕೊಳ್ಳಲು ನೀವು ಪ್ರತಿಯೊಂದು ವಿಷಯಕ್ಕೆ ಸರಿಯಾದ ಸಮಯವನ್ನು ಮೀಸಲಿಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದಎಂಕೆಎಸ್‌ಪಿಎಸ್‌ ಬಿಇಡಿ
ಕಾಲೇಜ್‌ನ ಮುಖ್ಯಸ್ಥರಾದ ಬಿ.ಕೆ.ಪಾಟೀಲ ಅವರು ಮಾತನಾಡಿ ನಾವು ಮಾಡುವ ಸಾಧನೆ ಹೇಗಿರಬೇಕೆಂದರೆ ವಿದ್ಯಾರ್ಥಿಗಳು ಕಂಡರೆ ನಮಸ್ಕರಿಸುವ ಹಂತಕ್ಕೆ ನಮ್ಮ ಸಾಧನೆಯಾಗಿರಬೇಕು ನಾವು ಯಾವಾಗಲು ಗುರುವಿನ ಮಾರ್ಗದರ್ಶನದೊಂದಿಗೆ ಮುನ್ನಡೆಯಬೇಕು
ಮೊಬೈಲ್ ಬಳಕೆಯಿಂದ ಆದಷ್ಟು ದೂರವಿರಿ ಪದೇ ಪದೇ ಬರುವ ಮೇಸಜ್‌ಗಳ ಸದ್ದು, ಆಗಾಗ ಬರುವ ಫೋನ್‌ ಕಾಲ್‌ಗಳು ನಿಮ್ಮ ಏಕಾಗ್ರತೆಯನ್ನು ಹಾಳುಮಾಡಬಹುದು.ಹೀಗಾಗಿ ಓದುವ ಸಮಯದಲ್ಲಿ ಮೊಬೈಲ್ ಬಳಕೆಯಿಂದ ಸ್ವಲ್ಪ ದೂರವಿದ್ದರೆ ಒಳಿತು. ಸ್ಪರ್ದಾತ್ಮಕ ಪರಿಕ್ಷೆತಯಾರಿ ಸಮಯದಲ್ಲಿ ಇಂಟರ್‌ನೆಟ್ ಸಹಾಯಬೇಕಾದಾಗ ಮಾತ್ರ ಮೊಬೈಲ್ ಬಳಸಿ ಇದರಿಂದನಿಮಗ ಅವಶ್ಯವಾಗಿರುವ ಸಹಾಯವನ್ನು ಮಾತ್ರಮೋಬೈಲ್ದಿಂದಪಡೆದುಕೊಳ್ಳಿ ಎಂದು ಮೋಬೈಲ್‌ದಿಂದ ಆಗುವ ತೊಂದರೆಗಳಮತ್ತು ಉಪಯೋಗಗಳ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ತಿಳುವಳಿಕೆ ನೀಡಿದರು.ಕಾಲೇಜಿನ ಹಿರಿಯ ಉಪನ್ಯಾಸಕಎಸ್.ಆಯ್.ದೊಡಮನಿ ಪ್ರಾಸ್ಥಾವಿಕ ಮಾತನಾಡಿದರು.
ಈ ಸಮಯದಲ್ಲಿ ಕಾಲೇಜಿನ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *