ತಾಲೂಕಿನ ಬೂತಲದಿನ್ನಿ ಗ್ರಾಮದ ಹತ್ತಿರ ಸಿಂಧನೂರು ಮತ್ತು ಮಸ್ಕಿ ಹೆದ್ದಾರಿಯ ಬಳಿ ನಿರ್ಮಿಸಲಾಗುತ್ತಿರುವ ಬ್ರಿಡ್ಜ್ ನ ಹತ್ತಿರ ಸೋಮವಾರ ತಡರಾತ್ರಿ ಎರಡು ಜೀವಗಳು ಬಲಿಯಾಗಿವೆ. ತಡರಾತ್ರಿ ಲಿಂಗಸ್ಗೂರು ತಾಲೂಕಿನ ಹಿರೇನಗನೂರು ಹಾಗೂ ಯದ್ದಲದೊಡ್ಡಿ ಗ್ರಾಮದ ಬೈಕ್ ಸವಾರರು ಇಬ್ಬರು ಲಿಂಗಸ್ಗೂರಿಗೆ ಪ್ರಯಾಣಿಸುತ್ತಿದ್ದವರು ಏಕಾಏಕಿಯಾಗಿ ಕಾಮಗಾರಿ ನಡೆಯುತ್ತಿರುವ ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸಂಚಾರಿ ಠಾಣೆಯ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕಳಿಸಿದ್ದಾರೆ. ನಂತರ ಮಂಗಳವಾರ ಕುಟುಂಬದ ಸದಸ್ಯರು ಠಾಣೆಗೆ ಬಂದು, ಬ್ರಿಡ್ಜ್ ಕಾಮಗಾರಿ ಬಗ್ಗೆ ಹರಿಹಾಯ್ದರು.

ಈಗಾಗಲೇ ಬ್ರಿಡ್ಜ್ ಕಾಮಗಾರಿ ಪ್ರಾರಂಭವಾಗಿ ಹಲವು ಕಾರಣಗಳಿಂದ ವರ್ಷಗಳೇ ಕಳೆದರೂ ಕೂಡ ಇನ್ನೂ ಕಾಮಗಾರಿ ಪೂರ್ಣವಾಗಿಲ್ಲ. ಇನ್ನಷ್ಟು ಬಲಿಯಾಗುವ ಮುಂಚೆ ಜನಪ್ರತಿನಿಧಿಗಳು ಜೀವಹಾನಿಯಾಗುವುದು ತಪ್ಪಿಸಬೇಕಿದೆ. ಈ ದಿಶೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ನೀಡಬೇಕು ಎಂದು ಸಾರ್ವಜನಿಕರು, ಕುಟುಂಬದವರು, ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *