ಲಿಂಗಸಗೂರು : ಫೆ, 4 ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾಯಿಲೆಗಳಿಗೆ ಸಂಬಂಧಪಟ್ಟ 5ಜನ ತಜ್ಞ ವೈದ್ಯರ ಹುದ್ದೆಗಳು ಖಾಲಿ ಇದ್ದು ಇದರಿಂದ ಈ ಭಾಗದ ಬಡರೋಗಿಗಳಿಗೆ ತುಂಬಾ ತೊಂದರೆಯಾಗಿದ್ದು ಕೂಡಲೇ 5 ತಜ್ಞ ವೈದ್ಯರನ್ನು ನೇಮಕ ಮಾಡಿ ಆದೇಶ ಮಾಡಬೇಕೆಂದು ದಿನಾಂಕ:- 25-08-2025 ರಂದು (D.H.O.) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಇವರಿಗೆ, ಮತ್ತು ಮಾನ್ಯ ಸಚಿವರಿಗೂ ಕೂಡ ಮನವಿ ಮಾಡಿದ್ದು. ಅಂದಿನಿಂದ ಇಂದಿನವರೆಗೂ ಸಚಿವರಿಗೂ ಮನವಿ ಮಾಡುತ್ತಾ ಬಂದಿದ್ದು, ಸಚಿವರು ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ರವರು ನಮ್ಮ ಮನವಿಗೆ ಸ್ಪಂದಿಸಿ ಇಬ್ಬರೂ ತಜ್ಞ ವೈದ್ಯರನ್ನು ನೇಮಕ ಮಾಡಿದ್ದಾರೆ. ಸತತವಾಗಿ ನಾಲ್ಕು ತಿಂಗಳ ಗಳಿಂದ ಕರುನಾಡ ವಿಜಯಸೇನೆ ತಾಲೂಕು ಸಮಿತಿಯ ವತಿಯಿಂದ ಹೋರಾಟ ಮಾಡುತ್ತಾ ಬಂದಿದೆ, ಈ ಹೋರಾಟದ ಪ್ರತಿಫಲಕ್ಕೆ ಜಯ ಸಿಕ್ಕಿದೆ ಎಂದು ದಿನಾಂಕ:-02-02-2026 ರಂದು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ನೂತನವಾಗಿ ನೇಮಕಗೊಂಡ ಇಬ್ಬರು ತಜ್ಞ ವೈದ್ಯರಿಗೆ ಕರುನಾಡ ವಿಜಯ ಸೇನೆ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕರುನಾಡ ವಿಜಯಸೇನೆ ತಾಲೂಕು ಅಧ್ಯಕ್ಷ ಹನುಮಂತ ಬಡಿಗೇರ್, ತಾಲೂಕು ಉಪಾಧ್ಯಕ್ಷ ರಂಗಪ್ಪ ಭೋವಿ, ನಗರ ಘಟಕ ಅಧ್ಯಕ್ಷ ಬಸವರಾಜ ರತ್ತಾಳ, ಪ.ಜಾ/ಪ.ಪಂ. ಘಟಕ ಅಧ್ಯಕ್ಷ ದುರಗಪ್ಪ ಪೂಜಾರಿ, ಅಲ್ಪ ಅಸಂಖ್ಯಾತ ಘಟಕ ಅಧ್ಯಕ್ಷ ಜಾಫರ್ ಅರಬರ್, ಯುವ ಘಟಕ ಅಧ್ಯಕ್ಷ ಸಂಗನಗೌಡ ಪಾಟೀಲ, ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಶ್ರೀಮತಿ ಲಲಿತಾ ಮರಳಿ, ತಾಲೂಕು ಮಹಿಳಾ ಘಟಕ ಉಪಾಧ್ಯಕ್ಷೆ ಶ್ರೀಮತಿ ಗದ್ದೆಮ್ಮ ಮರಗಂಟನಾಳ, ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಷ್ಮಾ ಚಿಕ್ಕಜಾವೂರ, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸುನೀತಾ ಪವರ್, ಸಹ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಚಿತಾಪೂರ, ಕಾರ್ಯದರ್ಶಿ ಶ್ರೀಮತಿ ಸುಮಂಗಲಾ ಚಿತಾಪೂರ, ತಾಲೂಕು ಖಜಾಂಚಿ ಶ್ರೀಮತಿ ಶಾಹಿನ್ ಬೇಗಂ ಆನೆಹೊಸೂರು, ತಾಲೂಕು ಯುವ ಮುಖಂಡ ಅಶೋಕ ಐದನಾಳ, ಚನ್ನಬಸವ ಮೇದನಾಪೂರ, ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
