ಮಸ್ಕಿ: ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯು ಬಿರುಸಿನಿಂದ ಸಾಗುತ್ತಿದ್ದು, ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಎಣಿಕೆ ಫಾರಂಗಳನ್ನು ವಿತರಿಸುತ್ತಿದ್ದಾರೆ ಈವರೆಗೆೆಶೇಕಡ 46 ರಷ್ಟು ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದೆ ಎಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಹಶೀಲ್ದಾರ್ ಮಂಜುನಾಥ ಭೋಗಾವತಿ ತಿಳಿಸಿದ್ದಾರೆ.
ಜುಲೈ 10ರ ಸಂಜೆ 5:00 ಗಂಟೆಯವರೆಗಿನ ಪ್ರಗತಿ ವರದಿ ಪ್ರಕಾರ ಒಟ್ಟು ಮತದಾರರು: ಜೂನ್ 16ರ ಅಂಕಿ-ಅಂಶಗಳ ಪ್ರಕಾರ ಕ್ಷೇತ್ರದಲ್ಲಿ ಒಟ್ಟು 2,14,049 ಮತದಾರರಿದ್ದಾರೆ.
ಫಾರಂ ವಿತರಣೆ*: ಒಟ್ಟು 2,14,049 ಎಣಿಕೆ ಫಾರಂಗಳನ್ನು (100%) ಬಿಎಲ್‌ಒಗಳ ಮೂಲಕ ಯಶಸ್ವಿಯಾಗಿ ವಿತರಿಸಲಾಗಿದೆ.
ಮನೆ ಮನೆ ಸಮೀಕ್ಷೆ ಅವಧಿ* ಜೂನ್ 30 ರಿಂದ ಜುಲೈ 29 ರವರೆಗೆ ನಡೆಯಲಿದೆ.ಹಾಗೂ ಇದುವರೆಗೆ ಒಟ್ಟು 92,243 (ಶೇ. 44) ಫಾರಂಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
ಮತದಾರರು ಆನ್‌ಲೈನ್ ಮೂಲಕ 65 ಫಾರಂಗಳನ್ನು ಸಲ್ಲಿಕೆ ಮಾಡಿದ್ದಾರೆ.ಮತ್ತು
ಸಮೀಕ್ಷೆ ವೇಳೆ 791 ಮೃತರ ಹೆಸರುಗಳು ಹಾಗೂ 1,412 ಕಾಯಂ ಸ್ಥಳಾಂತರಗೊಂಡ ಮತದಾರರನ್ನು ಗುರುತಿಸಲಾಗಿದ್ದು
16 ಮಂದಿ ಗೈರುಹಾಜರಾದ ಮತದಾರರು ಹಾಗೂ ಈಗಾಗಲೇ ಹೆಸರನ್ನು ನೋಂದಾಯಿಸಿಕೊಂಡಿರುವ 235 ಮತದಾರರ ವಿವರಗಳನ್ನು ಪತ್ತೆಹಚ್ಚಲಾಗಿದೆ.
ಮನೆ ಮನೆ ಸಮೀಕ್ಷೆ ಮತ್ತು ಡಿಜಿಟಲೀಕರಣ ಪ್ರಕ್ರಿಯೆಗಳು ಜುಲೈ 29 ರವರೆಗೆ ಮುಂದುವರಿಯಲಿದ್ದು, ಸಾರ್ವಜನಿಕರು ಈ ಪ್ರಕ್ರಿಯೆಗೆ ಸೂಕ್ತ ಸಹಕಾರ ನೀಡಬೇಕಾಗಿ ಅಧಿಕಾರಿಗಳು ಪತ್ರಿಕೆ ಪ್ರಕಟಣೆ ಮೂಲಕ ಮತದಾರರಲ್ಲಿ ಮನವಿ ಮಾಡಿದ್ದಾರೆ..

