ಬಳ್ಳಾರಿ / ಕಂಪ್ಲಿ : ಆಶಾ ಜ್ಯೋತಿ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ನೋಟ್ ಪುಸ್ತಕಗಳನ್ನು ವಿತರಣೆ ನಡೆಯಿತು.ಈ ವೇಳೆ ಮಾತನಾಡಿದ ಶಾಲಾ ಮುಖ್ಯಗುರು ಮಾಲಿಕ್ ಶಿಕ್ಷಣಕ್ಕೆ ಎಲ್ಲಾ ಮಕ್ಕಳ ತಂದೆ ತಾಯಿಗಳು ಹೆಚ್ಚಿನ ಮಹತ್ವ ಕೊಡುತ್ತಾರೆ. ಕಲಿಕೆಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಎಷ್ಟೇ ಕಷ್ಟ ಆದರೂ ತಮ್ಮ ಮಕ್ಕಳಿಗೆ ಒದಗಿಸುತ್ತಾರೆ. ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಆಶಾಜ್ಯೋತಿ ಫೌಂಡೇಶನ್ ಸಹಾಯದಿಂದ ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಆದರೆ ಕಲಿತ ನಂತರ ಮಕ್ಕಳು, ತಮ್ಮ ಪೋಷಕರಿಗೆ ಸಾಧ್ಯವಾದಷ್ಟು ನೆರವು ಆಗುವುದರೊಂದಿಗೆ ಅವರನ್ನು ಚೆನ್ನಾಗಿ ಆರೈಕೆ ಮಾಡಬೇಕು ಮತ್ತು ಇಂತಹ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಫೌಂಡೇಶನ್ ನ ಪದಾಧಿಕಾರಿಗಳಾದ ಜವುಕು ಅರ್ಜುನ್ ಬಾಬು ಮತ್ತು ಸಹದೇವ ರವರು ಮಾತನಾಡಿ, ಸತತ ಮೂರು ವರ್ಷಗಳಿಂದ ಈ ಶಾಲೆಗೆ ಕಲಿಕೆಗೆ ಬೇಕಾದ ಪರಿಕರಗಳನ್ನು ನೀಡುತ್ತಿದ್ದೇವೆ ಸ್ವಯಂ ಆಸಕ್ತಿಯಿಂದ ಪುಸ್ತಕಗಳು ಓದಿ ದೈನಂದಿನ ಅನುಭವಗಳಿಂದ ಕಲಿಯಿರಿ, ಉದ್ಯೋಗಕ್ಕೆ ಪೂರಕವಾದ ನಿರ್ದಿಷ್ಟ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಿ, ದಿನಕ್ಕೆ ಕನಿಷ್ಠ 20-30 ನಿಮಿಷ ಹೊಸ ವಿಷಯಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ದೇಶಕ್ಕೆ ಒಳ್ಳೆ ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

100 ಮಕ್ಕಳಿಗೆ ಶಾಲಾಬ್ಯಾಗ್, ಪ್ರತಿ ಮಕ್ಕಳಿಗೆ 6ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಇವರ ಸಮಾಜ ಸೇವೆಗೆ ಶಾಲಾವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಗೋಪಾಲ, ಗ್ರಾ.ಪಂ.ಮಾಜಿ ಅಧ್ಯಕ್ಷ ಪಂಪಾಪತಿ, ಸಹಶಿಕ್ಷಕರಾದ ಸುನೀತಾ ಊರಿನ ಗಣ್ಯರು, ಪಾಲಕ-ಪೋಷಕರು ಸೇರಿದಂತೆ ಮಕ್ಕಳು ಹಾಜರಿದ್ದರು.

Leave a Reply

Your email address will not be published. Required fields are marked *