ಹಾಲಾಪೂರ:ಗ್ರಂಥಾಲಯಗಳು ಜ್ಞಾನದ ಭಂಡಾರ ಅವು ಓದುಗರಿಗೆ ಸ್ಪೂರ್ತಿ ಮತ್ತು ಕಲ್ಪನೆಗಳಿಗೆ ಜನ್ಮ ನೀಡುವ ತಾಣ ಎಂದು ಆಲ್ಬರ್ಟ್ ಐನ್ಸ್ಟೈನ್ ಹೇಳುತ್ತಾರೆ.ಆದರೆ ಮಸ್ಕಿ ತಾಲ್ಲೂಕಿನ ಹಾಲಾಪೂರದಲ್ಲಿ 2016-17 ರ ಸಾಲಿನ ಪ್ರತಾಪಗೌಡ ಪಾಟೀಲ್ ಶಾಸಕರ ಅವಧಿಯಲ್ಲಿ ಎಸ್ ಸಿ ಪಿ, ಟಿ ಎಸ್ ಪಿ ಯೋಜನೆಯಲ್ಲಿ ನಿರ್ಮಿಸಿದ ಗ್ರಾಮ ಪಂಚಾಯತಿ ಗ್ರಂಥಾಲಯ ಕಟ್ಟಡ 15 ಲಕ್ಷ ರೂಪಾಯಿ ಮೊತ್ತದ, ನಿರ್ಮಿತಿ ಕೇಂದ್ರ ನಿರ್ಮಾಣದಲ್ಲಿ ಹಾಲಾಪೂರ ಬಿ ಕರಿಯಪ್ಪ ಅವರು ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಿ ಏದಾರು ವರ್ಷವಾದರು ಇನ್ನೂ ಕಟ್ಟಡವನ್ನು ಗ್ರಂಥಾಲಯಕ್ಕೆ ಒಪ್ಪಿಸಿಲ್ಲ, ಕಟ್ಟಡಕ್ಕೆ ಬೀಗ ಹಾಕಿ ಬಿಟ್ಟಿದ್ದಾರೆ,ನಿರ್ಮಿತಿ ಕೇಂದ್ರದ ಅಂದಿನ ಅಧಿಕಾರಿಗಳು ಇನ್ನೂ ಆರು ಲಕ್ಷರೂಪಾಯಿ ಬಾಕಿ ಹಣ ನನಗೆ ಕೊಟ್ಟಿಲ್ಲ ಅದಕ್ಕೆ ನಾನು ಬೀಗ ಹಾಕಿದ್ದೆನೆ ಎಂದು ಬಿ ಕರಿಯಪ್ಪ ಪಾಟೀಲ್ ನ್ಯೂಜ್ ಜೊತೆ ಮಾತನಾಡಿದರು. ಹಾಲಾಪೂರ ಗ್ರಂಥಾಲಯ ಒಳ್ಳೆಯ ಡಿಜಿಟಲ್ ಆಗಿದ್ದು,ಸಾವಿರಾರು ಪುಸ್ತಕಗಳು,ಕಂಪ್ಯೂಟರ್ ಇವೆ. ದಿನನಿತ್ಯ ನೂರಾರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಓದಲು ಬರುತ್ತಾರೆ,200 ಕ್ಕೂ ಅಧಿಕ ಸದಸ್ಯರು ಇದ್ದಾರೆ.

“ಸುತ್ತಲೂ ಮೂತ್ರ ವಿಸರ್ಜನೆ ಮಾಡುತ್ತಾರೆ,ಸ್ವಚ್ಛತೆ ಇಲ್ಲ,ಕಾಂಪೌಂಡ್ ವ್ಯವಸ್ಥೆ ಅವಶ್ಯಕತೆ ಇದೆ” – ಸುದೀಪ್ ವಿದ್ಯಾರ್ಥಿ

“ಜಾಗತಕೊರತೆ ಇದೆ,ಓದುಗರ ಸಂಖ್ಯೆ ಹೆಚ್ಚಾಗಿದೆ ಅದಕ್ಕೆ ಹೊಸ ಗ್ರಂಥಾಲಯ ಕಟ್ಟಡ ಬೇಗನೆ ವ್ಯವಸ್ಥೆ ಮಾಡಿಕೊಡಿ”…. ಗ್ಯಾನಪ್ಪ ಗ್ರಂಥಪಾಲಕ

ನನಗೆ ಇನ್ನೂ ಆರು ಲಕ್ಷ ರೂಪಾಯಿ ಬಾಕಿ ಹಣ ಬರಬೇಕು,ಆರುವರ್ಷ ಆಯ್ತು, ಅದಕ್ಕೆ ಗ್ರಂಥಾಲಯ ಕಟ್ಟಡಕ್ಕೆ ಬೀಗ ಹಾಕಿದ್ದೆನೆ” – ಬಿ ಕರಿಯಪ್ಪ ಗುತ್ತೆದಾರ

Leave a Reply

Your email address will not be published. Required fields are marked *