ತಾಳಿಕೋಟಿ: ಉಪ ವಿಭಾಗ ವ್ಯಾಪ್ತಿಯ 110/11 ಕೆ.ವಿ. ತಾಳಿಕೋಟಿ ಉಪ ಕೇಂದ್ರದಿಂದ ಹೊರ ಹೋಗುವ ಎಲ್ಲಾ ಫೀಡರ್ ಗಳಲ್ಲಿ ದಿನಾಂಕ 14-6-2026 ರಂದು ವಿದ್ಯುತ್ ವ್ಯತ್ಯಯ ಆಗಲಿದೆ. ತಾಳಿಕೋಟಿ ಕಾರ್ಯ ಮತ್ತು ಪಾಲನೆ ಉಪವಿಭಾಗ ವ್ಯಾಪ್ತಿಯ 110/11 ಕೆ ವಿ ಉಪ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಮಾಡಬೇಕಾಗಿರುವುದರಿಂದ ಜೂನ್ 14, 2026 ರಂದು ಬೆಳಗ್ಗೆ 10-00 ಘಂಟೆಯಿಂದ ಸಂಜೆ 5:00 ಘಂಟೆಯವರೆಗೆ ತಾಳಿಕೋಟಿ ಪಟ್ಟಣ ಮಿಣಜಗಿ, ಮೂಕಿಹಾಳ, ಶಿವಪುರ, ಹಗರಗುಂಡ, ನಾಗೂರ, ಬಳಗಾನೂರ, ಹಿರೂರ, ಕೊಣ್ಣೂರ, ತುಂಬಗಿ, ಹೊಸಹಳ್ಳಿ, ಬಿಳೆಭಾವಿ, ಬಿ.ಸಾಲವಾಡಗಿ, ಮಟಕ- ದೇವನಹಳ್ಳಿ, ಕಾರಗನೂರ, ಬೇಲೂರ, ಶಳ್ಳಗಿ, ನಾವದಗಿ, ಲಕ್ಕುಂಡಿ ಗ್ರಾಮಗಳಿಗೆ ಮತ್ತು ಮೂಕಿಹಾಳ ಹಾಗೂ ಮಾಳೂರ ಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್ ಅಡಚಣೆ ಉಂಟಾಗಲಿದೆ. ಆದ್ದರಿಂದ ತಾಳಿಕೋಟಿ ತಾಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಲ್ಲ ಗ್ರಾಹಕರು ಸಹಕರಿಸಬೇಕೆಂದು ತಾಳಿಕೋಟಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಹೆಚ್. ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *