ತಾಳಿಕೋಟಿ: ವೀರರಾಣಿ ಶ್ರೀ ಕಿತ್ತೂರ ಚೆನ್ನಮ್ಮ ಪುತ್ತಳಿ ನಿರ್ಮಾಣ ಸೇವಾ ಸಮಿತಿ ತಾಳಿಕೋಟಿ ವತಿಯಿಂದ ಚೆನ್ನಮ್ಮಾಜಿ ಮೂರ್ತಿ ಪ್ರತಿಷ್ಠಾಪನೆಯ 3 ನೇ ವಾರ್ಷಿಕೋತ್ಸವ ಅಂಗವಾಗಿ ಇಂದಿನಿಂದ(ಜೂನ್.11ರಿಂದ 22) ರವರೆಗೆ ರಾಜವಾಡೆ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 11 ರಿಂದ 22 ರವರೆಗೆ ಪ್ರತಿದಿನ ಸಂಜೆ 7 ರಿಂದ 8 ಗಂಟೆಯವರೆಗೆ ರಾಷ್ಟ್ರಮಾತೆ ಕಿತ್ತೂರು ಚೆನ್ನಮ್ಮ ರವರ ಪುರಾಣ ಕಾರ್ಯಕ್ರಮ ನಡೆಯುವುದು. ಹಿಕ್ಕನಗುತ್ತಿ ಲಿಂಗಾಯತ ಮಹಾ ಮಠದ ಪೂಜ್ಯ ಶ್ರೀ ಮ.ನಿ.ಪ್ರ. ಪ್ರಭುಲಿಂಗ ಮಹಾಸ್ವಾಮಿಗಳು ಪುರಾಣ ನಡೆಸಿಕೊಡುವರು. ಕುದುರಗೊಂಡ ಗ್ರಾಮದ ಕುಮಾರ ಭಾವಿಮನಿ ಹಾಗೂ ಬಸನಗೌಡ ಬಿರಾದಾರ ಸಂಗೀತ ಕಾರ್ಯಕ್ರಮ ನೆರವೇರಿಸಿ ಕೊಡುವರು. ಪ್ರತಿದಿನ ನಡೆಯುವ ಪುರಾಣ ಕಾರ್ಯಕ್ರಮದಲ್ಲಿ ರೈತ ದಂಪತಿಗಳಿಗೆ, ಶಿಕ್ಷಕರಿಗೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಪೌರಕಾರ್ಮಿಕರಿಗೆ, ಮಾಜಿ ಸೈನಿಕರಿಗೆ, ಅಡತ ಮರ್ಚೆಂಟ್ ಮಾಲೀಕರಿಗೆ, ಡ್ರೈವರ್-ಮಾಲಿಕರಿಗೆ, ವರ್ತಕರಿಗೆ, ಕಟ್ಟಡ ಕಾರ್ಮಿಕರಿಗೆ, ಅಂಗನವಾಡಿ ಆಶಾ ಬಿಸಿಯೂಟ ಸಿಬ್ಬಂದಿಗಳಿಗೆ ಸನ್ಮಾನಿಸಲಾಗುವುದು. ಜೂನ್ 21ರಂದು ಮಧ್ಯಾಹ್ನ 3 ಗಂಟೆಯಿಂದ ಪಟ್ಟಣದ ದೇವರ ಹಿಪ್ಪರಗಿ ರಸ್ತೆಯಲ್ಲಿರುವ ರಾಣಿ ಚೆನ್ನಮ್ಮ ಸರ್ಕಲ್ ದಿಂದ ರಾಜವಾಡೆಯವರೆಗೆ ಚೆನ್ನಮ್ಮಾಜಿಯ ಕಂಚಿನ ಮೂರ್ತಿಯ ಭವ್ಯ ಮೆರವಣಿಗೆ ಸಕಲ ವಾದ್ಯ ಮೇಳಗಳೊಂದಿಗೆ ನಡೆಯುವುದು. ಜೂನ್ 22ರಂದು ಬೆಳಿಗ್ಗೆ 10-00 ಘಂಟೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಲಿವೆ. ಅಂದೇ ಸಂಜೆ 6:00 ಘಂಟೆಗೆ ತೆಲಂಗಾಣ ರಾಜ್ಯದ ಮಲ್ಲಯ್ಯಗಿರಿ ದೇಗುಲಮಡಿ ಮತ್ತು ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಪರಮಪೂಜ್ಯ ಡಾ. ಶ್ರೀ ಬಸವಲಿಂಗ ಅವಧೂತರ ಸಾನಿಧ್ಯದಲ್ಲಿ ಪುರಾಣ ಮಹಾ ಮಂಗಲ ಕಾರ್ಯಕ್ರಮ ಜರುಗುವುದು ಇದರಲ್ಲಿ ನಾಡಿನ ಹರಚರ ಗುರುಮೂರ್ತಿಗಳು, ರಾಜಕೀಯ ದುರೀಣರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಸಮಾಜದ ಗಣ್ಯರು ಹಿರಿಯರು ಉಪಸ್ಥಿತರಿರುವರು. ಯಾವತ್ತು ತಾಳಿಕೋಟಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮ ಸಂಚಾಲಕಿ, ಪುರಸಭೆ ಮಾಜಿ ಅಧ್ಯಕ್ಷೆ ನೀಲಮ್ಮಗೌಡ್ತಿ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *