ಮಸ್ಕಿ : ದೀನ-ದಲಿತರು ಮತ್ತು ಭೂ ರಹಿತರಿಗೆ ಭೂಮಿಯ ಹಕ್ಕು ಸಿಗಬೇಕೆಂದು,ಸಾರಾಯಿ ಅಂಗಡಿ ಬೇಡ ಹೋಬಳಿಗೊಂದು ವಸತಿ ಶಾಲೆ ಬೇಕೆಂದು ರಾಜ್ಯಾದ್ಯಂತ ಬೃಹತ್ ರ‍್ಯಾಲಿಗಳನ್ನು,ಭೂಹೋರಾಟಗಳನ್ನು ಕೈಗೊಂಡವರು ಪ್ರೊ.ಬಿ.ಕೃಷ್ಣಪ್ಪ ನವರು ಎಂದು ಮಸ್ಕಿ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮೌನೇಶ ಮುರಾರಿ ತಿಳಿಸಿದರು.
ಪಟ್ಟಣದ ಗಾಂಧಿನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಪ್ರೊ.ಬಿ.ಕೃಷ್ಣಪ್ಪ ಅವರ 88ನೇ ಜನ್ಮದಿನದ ಗೌರವಪೂರ್ವಕವಾಗಿ ಅಂಬೇಡ್ಕರ್ ಪ್ರತಿಮೆಗೆ ಹಾಗೂ ಪ್ರೊ.ಬಿ.ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಹಲವಾರು ಹಿರಿಯ ಮುಖಂಡರು ಹಾಗೂ ಹೋರಾಟಗಾರರ ನೇತೃತ್ವದಲ್ಲಿ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದರು.
ಅದೇ ರೀತಿ ಹಿರಿಯ ದಲಿತ ಸಾಹಿತಿ ಸಿ.ದಾನಪ್ಪ ನಿಲೋಗಲ್ ಅವರು ಮಾತನಾಡಿ,ಕೃಷ್ಣಪ್ಪ ನವರ ಹೋರಾಟದ ಬದುಕು ಇಂದಿನ ಯುವಜನತೆಗೆ ಮಾದರಿಯಾಗಿದೆ ಹಾಗೂ
ಮಕ್ಕಳು ಹಾಗೂ ಯುವಕರಿಗೆ ಸಾಮಾಜಿಕ ಜಾಗೃತಿ,ಶಿಕ್ಷಣ ಮತ್ತು ಸಮಾನತೆಯ ಮಹತ್ವದ ಕುರಿತು ಅರಿವು ಮೂಡಿಸಿದ ಮಹಾನ್ ನಾಯಕ ಎಂದು ತಿಳಿಸಿದರು.
ತದನಂತರ ದೊಡ್ಡಪ್ಪ ಮುರಾರಿ ಮಾತನಾಡಿ
ಸಮಾಜದಲ್ಲಿದ್ದ ಜಾತೀಯತೆ,ಅಸ್ಪೃಶ್ಯತೆ ಹಾಗೂ ದೇವದಾಸಿ ಪದ್ಧತಿಯಂತಹ ಅನಿಷ್ಟ ಆಚರಣೆಗಳ ವಿರುದ್ಧ ತೀವ್ರವಾಗಿ ಹೋರಾಡಿದ ಮಹಾನ್ ರಾಷ್ಟ್ರ ನಾಯಕ ಕೃಷ್ಣಪ್ಪ ನವರು ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಪುರಸಭೆ ಸದಸ್ಯರಾದ ದೊಡ್ಡ ಕರಿಯಪ್ಪ ಮುರಾರಿ,ದುರ್ಗಾಪ್ರಸಾದ್ ತೋರಣದಿನ್ನಿ,ಪ್ರಶಾಂತ ಮುರಾರಿ,ಕಾಶಿಮಪ್ಪ ಡಿ ಮುರಾರಿ,ಬಾಲಸ್ವಾಮಿ ಜಿನ್ನಾಪೂರ,ಮರಿಸ್ವಾಮಿ ಬೆನಕನಾಳ,ಯಮನಪ್ಪ ಚಲುವಾದಿ,ಸದ್ದಾಂ ಮಸ್ಕಿ ಸೇರಿದಂತೆ ಹಲವಾರು ಪ್ರೋ.ಬಿ.ಕೃಷ್ಣಪ್ಪನವರ ಅಭಿಮಾನಿಗಳು,ಮುಖಂಡರು,ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

