SSLC ಮೇಲೆಯೇ Paramedical Course ಮಾಡಲು ಮತ್ತೆ ಅವಕಾಶ
NCAHP ಹಾಗೂ Paramedical Board ನ PUC Science ಅರ್ಹತೆ ನಿಯಮಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ — SSLC ಮೇಲೆ PARAMRDICAL ಮಾಡಲು ವಿದ್ಯಾರ್ಥಿಗಳಿಗೆ ಮತ್ತೆ ಅವಕಾಶ
ಪ್ಯಾರಾಮೆಡಿಕಲ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು PUC Science ಕಡ್ಡಾಯ ಅರ್ಹತೆ ವಿಧಿಸಿದ್ದ ರಾಷ್ಟ್ರೀಯ ಸಹಾಯಕ ಆರೋಗ್ಯ ವೃತ್ತಿಗಳ ಆಯೋಗ (NCAHP) ಹಾಗೂ Paramedical Boardನ ನಿರ್ಧಾರಕ್ಕೆ ಮಾನ್ಯ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿರುವ ಹಿನ್ನೆಲೆಯಲ್ಲಿ, ಇದೀಗ ಮತ್ತೆ SSLC ಉತ್ತೀರ್ಣ ವಿದ್ಯಾರ್ಥಿಗಳಿಗೆ ಪ್ಯಾರಾಮೆಡಿಕಲ್ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯುವ ಅವಕಾಶ ಲಭ್ಯವಾಗಿದೆ.
ಹಿಂದಿನಂತೆ SSLC ನಂತರವೇ ವಿವಿಧ ಡಿಪ್ಲೋಮಾ ಪ್ಯಾರಾಮೆಡಿಕಲ್ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರದ NCAHP ನಿಯಮಾವಳಿಗಳ ಪ್ರಕಾರ 2026–27ನೇ ಶೈಕ್ಷಣಿಕ ಸಾಲಿನಿಂದ PUC Science ಅರ್ಹತೆಯನ್ನು ಕಡ್ಡಾಯಗೊಳಿಸಲಾಗಿದ್ದು, ಕೇವಲ ಎರಡು ಕೋರ್ಸ್‌ಗಳಿಗೆ ಮಾತ್ರ ಕೇಂದ್ರ ಮಟ್ಟದಲ್ಲಿ ಅನುಮೋದನೆ ನೀಡಲಾಗಿತ್ತು. ಇದರಿಂದ ಕರ್ನಾಟಕದ ವಿಶೇಷವಾಗಿ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶದಿಂದ ವಂಚಿತರಾಗಿದ್ದರು.
ಪ್ರಸ್ತುತ ಪ್ಯಾರಾಮೆಡಿಕಲ್ ವಿಭಾಗದಲ್ಲಿ DMLT, DHI, DOT & AT, DXT, DMIT, DNRT, DOT, DDT ಸೇರಿದಂತೆ ಒಟ್ಟು 9 ಡಿಪ್ಲೋಮಾ ಕೋರ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಕೋರ್ಸ್ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳಿಗೆ ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್, ಎಕ್ಸ್‌ರೇ ಟೆಕ್ನಿಷಿಯನ್, ಡಯಾಲಿಸಿಸ್ ಟೆಕ್ನಿಷಿಯನ್, ಓಪರೇಶನ್ ಥಿಯೇಟರ್ ಟೆಕ್ನಿಷಿಯನ್ ಸೇರಿದಂತೆ ವಿವಿಧ ಆರೋಗ್ಯ ಸೇವಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ.
PUC Science ಕಡ್ಡಾಯ ನಿಯಮ ಜಾರಿಗೆ ಬಂದ ಬಳಿಕ ಪ್ಯಾರಾಮೆಡಿಕಲ್ ಕಾಲೇಜುಗಳ ಪ್ರವೇಶ ಪ್ರಮಾಣದಲ್ಲಿ ಗಣನೀಯ ಕುಸಿತ ಉಂಟಾಗಿತ್ತು. ಈ ಹಿನ್ನೆಲೆ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳ ಪರವಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮಧ್ಯಂತರ ತಡೆ ಆದೇಶ ನೀಡಿದ್ದು, ಮತ್ತೆ SSLC ನಂತರವೇ ಕೋರ್ಸ್‌ಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ.
ಹೈಕೋರ್ಟ್ ಆದೇಶದಿಂದ ವಿದ್ಯಾರ್ಥಿಗಳಿಗೆ ಕಡಿಮೆ ಅವಧಿಯಲ್ಲಿ ಉದ್ಯೋಗಮುಖಿ ಶಿಕ್ಷಣ ಪಡೆಯುವ ದಾರಿ ಮತ್ತೆ ತೆರೆದಿದ್ದು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಸಂತಸ ವ್ಯಕ್ತವಾಗಿದೆ. ಸರ್ಕಾರವು ಶೀಘ್ರದಲ್ಲೇ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಬೇಕೆಂದು ಸಂಬಂಧಿತ ವಲಯಗಳಿಂದ ಆಗ್ರಹ ವ್ಯಕ್ತವಾಗಿದೆ

