ಸಿಂಧನೂರು : ನಗರದ ಎಲ್ ಬಿ ಕೆ ಪದವಿ ಪೂರ್ವ ಕಾಲೇಜಿನ 2025- 26 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 576 ಅಂಕ ಪಡೆದು ಪ್ರತಿಶತ 96ರಷ್ಟು ಅಂಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ ಈ ವಿದ್ಯಾರ್ಥಿನಿ ಕನ್ನಡದಲ್ಲಿ 100 ಕ್ಜೆ 100 ಅಂಕ ಪಡೆದಿದ್ದಾಳೆ.ದ್ವಿತೀಯ ಸ್ಥಾನ ದೇವರಾಜ ಬಂಗಾರಿ ಕ್ಯಾಂಪ 566. ಅಂಕ ಪಡೆದಿದ್ದಾನೆ,ತೃತೀಯ ಸ್ಥಾನ. 559 ಅಂಕ ಪಡೆದಿದ್ದಾರೆ
ಕಲಾವಿಭಾಗದಲ್ಲಿ ಬಸಮ್ಮ ಶೇಷಪ್ಪ ಇರಬಗೆರಾ 600 ಕ್ಕೆ 571 ಅಂಕ ಪಡೆದು ಕನ್ನಡ 100 ಕ್ಕೆ 100 _ ಅರ್ಥಶಾಸ್ತ್ರದಲ್ಲಿ 100 ಕ್ಜೆ 100 ಪಡೆದು ಪ್ರತಿಶತ 95 .16 ರಷ್ಟು ಅಂಕ ಪಡೆದು ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ ದ್ವಿತೀಯ ಸ್ಥಾನ ಅಂಬಿಕಾ ಜಿನೂರು 561, ತೃತೀಯ ಸ್ಥಾನ ಅರುಣಕುಮಾರ 560 ಅಂಕ ಪಡೆದಿದ್ದಾನೆ ಈ ವಿದ್ಯಾರ್ಥಿಗಳಿಗೆ ಕಾಲೇಜಿನ ಸಂಸ್ಥೆಯ ಅಧ್ಯಕ್ಷರಾದ ಶರಣಪ್ಪ ತೆಂಗಿನಕಾಯಿ ಮತ್ತು ನೊಬೆಲ್ ಪದವಿ ವಿದ್ಯಾಲಯದ ಅಧ್ಯಕ್ಷರಾದ ಪರಶುರಾಮ ಮಲ್ಲಾಪುರ ಉಪಾಧ್ಯಕ್ಷರಾದ ಶಂಕರ್ ಪತ್ತಾರ್ ಕಾರ್ಯದರ್ಶಿಯಾದ ಡಾ.ಅರುಣಕುಮಾರ ಬೇರ್ಗಿ ಖಜಾಂಚಿಗಳಾದ ಜಯಪ್ಪ ಗೊರೆಬಾಳ ಮತ್ತು ಕಾಲೇಜಿನ ಪ್ರಾಂಶುಪಾಲರಾದ. ಶಿವಕುಮಾರ ಬಿಂಗಿ ಹಾಗೂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಐಶ್ವರ್ಯ ದಳವಾಯಿ ಹಾಗೂ ಸಂಸ್ಥೆಯ ಎಲ್ಲಾ ಉಪನ್ಯಾಸಕ ವರ್ಗ ಸಿಬ್ಬಂದಿತರ ವರ್ಗ ಅಭಿನಂದಿಸಿದ್ದಾರೆ
ಮಾರ್ಚ್ ನಲ್ಲಿ ನಡೆದ ದ್ವಿತೀಯ ವಾರ್ಷಿಕ ಪರೀಕ್ಷೆಗೆ 240 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ ಒಟ್ಟು 186 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಇದರಲ್ಲಿ 42 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ 95 ದ್ವಿತೀಯ ಸ್ಥಾನ 35 ತೃತೀಯ ಸ್ಥಾನದಲ್ಲಿ15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಭೂಗೋಳಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ ನಲ್ಲಿ ಸತತ ಎರಡು ವರ್ಷ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ .ಒಟ್ಟು ಕಾಲೇಜಿನ ಫಲಿತಾಂಶ 77.5ರಷ್ಟು ಬಂದಿದೆ ಎಂದು ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿದರು.


