ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತ ಪಿ.ಪರಮೇಶ ರವರನ್ನು ಅಧಿಕೃತವಾಗಿ ತಾಲೂಕು ಘಟಕದಿಂದ ಬೀದರ್‌ನಲ್ಲಿ ಏ.11 ಮತ್ತು 12 ರಂದು ನಡೆಯುವ ಸಮ್ಮೇಳನದಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಸ್ವೀಕರಿಸುವಂತೆ ಕಾ.ನಿ.ಪ.ಸಂಘದ ತಾ.ಅಧ್ಯಕ್ಷರಾದ ಆಶೋಕ ತಡಕಲ್ ಸನ್ಮಾನಿಸಿ ಆಹ್ವಾನಿಸಿ ಮಾತನಾಡಿ ಪ್ರತಿ ವರ್ಷದಂತೆ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದಿಂದ ಬೀದರ್‌ನಲ್ಲಿ ನಡೆಯಲ್ಲಿದು ಇಂತಹ ಕಾರ್ಯಕ್ರಮದಲ್ಲಿ ಮಾನ್ವಿ ತಾಲೂಕಿನ ಹಿರಿಯ ಸುದ್ದಿಮೂಲ ಪತ್ರಿಕೆಯ ವರದಿಗಾರರಾದ ಪಿ.ಪರಮೇಶರವರಿಗೆ ರಾಜ್ಯ ಘಟಕದಿಂದ ಅರಣ್ಯ ವಿಭಾಗದಲ್ಲಿ ಅತ್ಯುತ್ತಮ ವರದಿಗಾಗಿ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸುವಂತೆ ಕೋರಿದರು.
ಜಿಲ್ಲಾ ಘಟಕದ ಬಸವರಾಜ ಭೋಗವತಿ,ಶರಣಬಸವ ನೀರಮಾನ್ವಿ, ತಾಯಪ್ಪ ಬಿ.ಹೋಸುರು. ತಾಲೂಕು ಘಟಕದ ಕಾರ್ಯದರ್ಶಿ ರವಿ ಅಲ್ದಾಳ್, ಸಿದ್ದಾರಾಮಯ್ಯಸ್ವಾಮಿ, ಈಶಪ್ಪ ಬೈಲಮಾರ್ಚಡ್, ಬಸವ ತಡಕಲ್, ನಾಗರಾಜ, ಗೋವಿಂದ,ಬಸವರಾಜ ಕನ್ನಾರಿ, ಕಿರಣ್ ಕುಮಾರ , ಶಂಕರಪ್ಪ, ಶಿವಕುಮಾರ ಜಗ್ಲಿ, ಗಯಾಸ್, ರಾಮಾಂಜನೇಯ್ಯ,ನವೀನ್ ಕುಮಾರ, ಆನಂದಸ್ವಾಮಿ, ರಾಜಶೇಖರ, ರಾಜಶೇಖರ ಸ್ವಾಮಿ,ಮಹಾಂತೇಶ, ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *