ಕವಿತಾಳ :- ಪಟ್ಟಣದ ಸರ್ಕಾರಿ ಪಧವಿ ಪೂರ್ವ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಪಟ್ಟಣದ ಅಪ್ಸನಾ ತಂದೆ ಮಹಿಬೂಬ್ ಸಾಬ್ ಈ ವಿದ್ಯಾರ್ಥಿನಿಯು 600 ಕ್ಕೆ 569 ಅಂಕ(ಶೇ94.83) ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ, ಮಹಿಮೂದಾ ಬೇಗಂ 550 ಅಂಕ (ಶೇ.91.66) ಪಡೆದು ದ್ವಿತಿಯ ಸ್ಥಾನ, ಸುಮಂಗಲಾ 547 ಅಂಕ(ಶೇ.91.16) ಪಡೆದು ತೃತಿಯ ಸ್ಥಾನ ಪಡೆದಿದ್ದು ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹಾಗೂ ಪಟ್ಟಣದ ಜನತೆ ಅಭಿನಂದಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು 30 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 28 ವಿದ್ಯಾರ್ಥಿಗಳು ಪಾಸಾಗಿದ್ದಾರೆ ಒಟ್ಟು ವಾಣಿಜ್ಯ ವಿಭಾಗದ ಫಲಿತಾಂಶ ಶೇ93 ರಷ್ಟು ಬಂದತಾಗಿದೆ,
ಕಲಾ ವಿಭಾಗದಲ್ಲಿ ವಿಶೇಷ ಚೇತನ ವಿದ್ಯಾರ್ಥಿನಿ ಸಂಜನಾ 500ಕ್ಕೆ 480ಅಂಕ ಪಡೆದು (ಶೇ96%) ಪ್ರಥಮ ಸ್ಥಾನ , ಸೋಮೇಶ್ವರಿ 600ಕ್ಕೆ 539 ಅಂಕ (ಶೇ89.83)ಪಡೆದು ದ್ವಿತಿಯ ಸ್ಥಾನ, ಮಹ್ಮದ್ ರಿಯಾನ್ 535 ಅಂಕ (ಶೇ.89.16) ಪಡೆದು ತೃತಿಯ ಸ್ಥಾನ ಪಡೆದಿದ್ದು ಒಟ್ಟು 88 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 50 ವಿದ್ಯಾರ್ಥಿಗಳು ಪಾಸಾಗುವ ಮುಲಕ ಕಾಲೇಜಿನ ಫಲಿತಾಂಶ ಶೇ56.8 ರಷ್ಟಾಗಿದೆ.
ಉಪನ್ಯಾಸಕರ ಕೊರತೆ:
ಪಟ್ಟದ ಸರ್ಕಾರಿ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಉಪನ್ಯಾಸಕರ ಕೊರತೆ ಇರುವ ಕಾರಣ ಫಲಿತಾಂಶ ಕುಂಟಿಕೊಂಡಿದ್ದು ಮುಂದಿನ ದಿನಗಳಲ್ಲಿ ಉಪನ್ಯಾಸಕರನ್ನು ಭರ್ತಿ ಮಾಡುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ಭವಿಷ್ಯ ಉಜ್ವಲಕ್ಕಾಗಿ ಸರ್ಕಾರ ಮುಂದಾಗಬೇಕಿದೆ ಎಂದು ಬುದ್ದಿಜೀವಿಗಳ ಅಂಭೋಣವಾಗಿದೆ.

