ಅರಕೇರಾ : 2026 ನೇ ಸಾಲಿನ ಕರ್ನಾಟಕ ದ್ವೀತಿಯ ಪಿಯುಸಿ ಪರೀಕ್ಷೆ -೧ರ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು ಅರಕೇರಾ ಪಟ್ಟಣದಲ್ಲಿನ ಶ್ರೀ ಸಿದ್ದಯ್ಯ ಹವಲ್ದಾರ ಸರಕಾರಿ ಪದವಿ ಪೂರ್ವಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು ೩೬ ತೇರ್ಗಡೆಯಾದ ವಿದ್ಯಾರ್ಥಿಗಳು ೩೨ ಅನುರ್ತ್ತಿಣರಾದ ವಿದ್ಯಾರ್ಥಿಗಳು ೪ ಒಟ್ಟಾರೆ ಡಿಸ್ಟಿಂಕ್ಷನ್ ೮ ಪ್ರಥಮಶ್ರೇಣೆಯಲ್ಲಿ ೧೮ ದ್ವೀತಿಯ ಶ್ರೇಣೆಯಲ್ಲಿ ಉತ್ತೀರ್ಣ ೪ ತೃತೀಯ ಶ್ರೇಣೆಯಲ್ಲಿ ೨ತೇರ್ಗೆಡೆಯಾಗಿದ್ದು ಅರಕೇರಾ ಪಟ್ಟಣದಲ್ಲಿನ ಶ್ರೀ ಸಿದ್ದಯ್ಯ ಹವಲ್ದಾರ ಸರಕಾರಿ ಪದವಿ ಪೂರ್ವಕಾಲೇಜಿಗೆ ಶೇ ೮೮.೮ ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯರಾದ ಬುದ್ದಿವಂತಿ ತಿಳಿಸಿದ್ದಾರೆ.
ಕಾಲೇಜಿನಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ಕುಮಾರಿ ಫೌಜೀಯಾ ಬೇಗಂ ತಂದೆ ಇಬ್ರಾಹಿಂಸಾಬ ೬೦೦ಕ್ಕೆ ೫೪೮ ಅಂಕಪಡೆದು ಶೇಕಡ ೯೧.೩೩ ಕಾಳೇಜಿಗೆ ಪ್ರಥಮಸ್ಥಾನ ಪಡೆದುಕೊಂಡಿದ್ದಾಳೆ. ಕುಮಾರ ಎನ್ ಶರಣುಕುಮಾರ ತಂದೆ ಜಗದೀಶನಾಗೋಲಿ ೬೦೦ಕ್ಕೆ ೫೪೭ ಅಂಕಪಡೆದು ಶೇಕಡ ೯೧,೯೬ ದ್ವೀತೀಯ ಸ್ಥಾನ ಪಡೆದೆದಿರುತ್ತಾನೆ. ಕುಮಾರಿ ಪವಿತ್ರ ತಂದೆ ಬಸವಣ್ಣಯ್ಯಸ್ವಾಮಿ ನಾಗೋಲಿ ೬೦೦ಕ್ಕೆ ೫೩೨ ಅಂಕಪಡೆದು ಶೇಕಡ ೮೮.೬೬ ತೃತಿಯ ಸ್ಥಾನ ಪಡೆದಿರುತ್ತಾಳೆ. ಕುಮಾರಿ ಬಿಸ್ಮೀಲ್ಲಾ ತಂದೆ ಸಣ್ಣಪೀರಸಾಬ ೬೦೦ಕ್ಕೆ ೫೨೭ ಅಂಕಪಡೆದು ಶೇಕಡಾ ೮೭.೮೩ ನಾಲ್ಕನೇ ಸ್ಥಾನ ಪಡೆದಿರುತ್ಥಾಳೆ.
ದ್ವೀತಿಯ ಪಿಯುಸಿ ೧ರ ಪರೀಕ್ಷೆಯ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಉತ್ತಮಸಾಧನೆ ಮಾಡಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಬುದ್ದಿವಂತಿ ಮೇಡಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಲೇಜಿಗೆ ಉತ್ತಮ ಫಲಿತಾಂಶ ಪಡೆದು ಪಟ್ಟಣಕ್ಕೆ ಮತ್ತು ಕಾಲೇಜಿಗೆ ಕೀರ್ತಿ ತಂದುಕೊಟ್ಟಿರುವ ವಿದ್ಯಾರ್ಥಿಗಳಿಗೆ ಪಟ್ಟಣದ ಮುಖಂಡರು ಮತ್ತು ಜನಪ್ರತಿನಿಧಿಗಳು ಶಿಕ್ಷಣಪ್ರೇಮಿಗಳು ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಪ್ರಾಚಾರ್ಯರಿಗೂ ಉಪನ್ಯಾಸಕವರ್ಗದವರಿಗೂ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ.
ಕಾಲೇಜಿಗೆ ಅತಿ ಹೆಚ್ಚು ಅಂಕಪಡೆದ ವಿದ್ಯಾಥಿಗಳು
೧ ಕುಮಾರಿ ಫೌಜೀಯಾ ಬೇಗಂ ತಂದೆ ಇಬ್ರಾಹಿಂಸಾಬ ಅರಕೇರಾ
೨ ಕುಮಾರ ಎನ್ ಶರಣುಕುಮಾರ ತಂದೆ ಜಗದೀಶನಾಗೋಲಿ ಅರಕೇರಾ
೩) ಕುಮಾರಿ ಪವಿತ್ರ ತಂದೆ ಬಸವಣ್ಣಯ್ಯಸ್ವಾಮಿ ನಾಗೋಲಿ



