ರಾಯಚೂರು ಏಪ್ರಿಲ್ 09 (ಕರ್ನಾಟಕ ವಾರ್ತೆ): ರಾಯಚೂರು ರೈಲ್ವೇ ನಿಲ್ದಾಣದ ವೇದಿಕೆ ಸಂಖ್ಯೆ 02 ರ ಹತ್ತಿರ ಡೌನ್‌ಮೇನ್ ಲೈನ್ ರೈಲುಹಳಿಯ ಮದ್ಯೆ ಸುಮಾರು 25 ವರ್ಷದ ಅಪರಿಚಿತ ಗಂಡಸ್ಸು ಯಾವುದೋ ಚಲಿಸುವ ರೈಲು ಗಾಡಿಗೆ ಅಡ್ಡ ಮಲಗಿ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಈ ಕುರಿತು ರೈಲ್ವೇ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ನಂ 13/2026 ಯು/ಎಸ್ 194 ಬಿಎನ್‌ಎಸ್‌ಎಸ್ ರಿತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತದೇಹ ದೊರೆತ ಘಟನಾ ಸ್ಥಳಗಳಲ್ಲಿ ಮೃತನ ವಾರಸುದಾರರು ಯಾರು ಪತ್ತೆಯಾಗಿರುವುದಿಲ್ಲ. ಮೃತನ ವಾರುಸುದಾರ ಪತ್ತೆ ಹಾಗೂ ಪಿ.ಎಂ.ಇ. ಸಲುವಾಗಿ ಮೃತದೇಹಗಳನ್ನು ರಾಯಚೂರು ರೀಮ್ಸ್ ಆಸ್ಪತ್ರೆಯ ಶೀತಲ ಶವಗಾರದಲ್ಲಿ ಇಡಲಾಗಿದೆ.
ಅಪರಿಚಿತ ಗಂಡಸ್ಸು ವಯಸ್ಸು ಸುಮಾರು 25 ವರ್ಷ, ಎತ್ತರ ಸುಮಾರು 5.2 ಅಡಿ, ಗೋಧಿ ಮೈ ಬಣ್ಣ, ದುಂಡು ಮುಖ, ದಪ್ಪ ಮೂಗು, ಕಪ್ಪು ಕಣ್ಣುಗಳು, ತಲೆಯಲ್ಲಿ 2 ಇಂಚು ಕಪ್ಪು ಕೂದಲು, ಚಿಗರು ಗಡ್ಡ ಮೀಸೆ ಬಿಟ್ಟಿದ್ದು, ಸಾಧಾರಣ ಶರೀರ ಹೊಂದಿರುತ್ತಾನೆ.
ಒಂದು ತಿಳಿ ಗುಲಾಬಿ ಬಣ್ಣದ ರೆಡಿಮೇಡ್ ಶರ್ಟು, ಒಂದು ಒಂದು ನೀಲಿ ಬಣ್ಣದ ಜೀನ್ಸ ಪ್ಯಾಂಟ್, ಒಂದು ಬೂದು ಬಣ್ಣ ಚಡ್ಡಿ, ಕೆಂಪು ಬಣ್ಣದ ಉಡದಾರ ಧರಿಸಲಾಗಿದೆ.
ಮೃತನ ವಾರಸುದಾರರು ಪತ್ತೆಯಾದಲ್ಲಿ ಅಥವಾ ಈ ಮೃತನ ಹೊಲಿಕೆಯ ಪುರುಷ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08532-231716 ಅಥವಾ ಮೊಬೈಲ್ ಸಂಖ್ಯೆ: 9480802111 ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ: 080-22871291ಗೆ ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

