ರಾಯಚೂರು ಏಪ್ರಿಲ್ 09 (ಕರ್ನಾಟಕ ವಾರ್ತೆ): ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 2ರ 110 ಕೆ.ವಿ ಮೇಸ್, ವಡವಟ್ಟಿ ವಿದ್ಯುತ್ ಮಾರ್ಗದ ದುರಸ್ತಿ ಹಾಗೂ ಸುಧಾರಣೆ ಕಾಮಗಾರಿಯನ್ನು ನಿರ್ವಹಿಸುವ ಪ್ರಯುಕ್ತ ಏಪ್ರಿಲ್ 11ರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ದೇವಿ ನಗರ, ಹರಿಜನವಾಡ, ನವಾಬ್ ಗಡ್ಡ, ಎನ್.ಜಿ.ಓ ಕಾಲೋನಿ, ಮುನ್ನೂರುವಾಡಿ. ಜಲಾಲ್ ನಗರ, ಮಾರ್ಕೇಟ್ ಯಾರ್ಡ್, ನೀರಭಾವಿ ಕುಂಟಾ, ಬಸವನಭಾವಿ ಸರ್ಕಲ್, ತಾಯಮ್ಮ ಗುಡಿ, ದೇವಿನಗರ, ಅಶ್ವಿನಿ ಕಾಲೋನಿ, ಅಗ್ರೀಗೋಲ್ಡ್, ಗದ್ವಾಲ ರೋಡ, ಎಮ್.ವಿ.ಜಿ. ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿರಂತರ ಗ್ರಾಹಕರ ಸೇವಾ ಕೇಂದ್ರ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 2ರ ಸಹಾಯಕಕಾರ್ಯನಿರ್ವಾಹಕಅಭಿಯಂತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

