ಮಸ್ಕಿ: ಅಖಿಲ ಭಾರತೀಯ ಶ್ರೀಭಗವಾನ್ ವಾಲ್ಮೀಕಿ ಕರ್ನಾಟಕ ಸಂಘದ ರಾಜ್ಯಾಧ್ಯಕ್ಷರನ್ನಾಗಿ ನಾಗರಾಜ ಚಿಗರಿಯನ್ನು ನೇಮಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಹಾಮಂಡಲೇಶ್ವರ ವಿವೇಕನಾಥ ಆದೇಶ ಹೊರಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕರ್ನಾಟಕನಾದ್ಯಂತ ಓಡಾಡಿ ಪ್ರತಿ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಅಖಿಲ ಭಾರತೀಯ ಶ್ರೀಭಗವಾನ್ ವಾಲ್ಮೀಕಿ ಕರ್ನಾಟಕ ಸಂಘದ ಪದಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಸಂಘವನ್ನು ಬಲಪಡಿಸಬೇಕೆಂದು ಆದೇಶ ಹೊರಡಿಸಿದ್ದಾರೆ.
