ರಾಯಚೂರು ಏಪ್ರಿಲ್ 04 (ಕರ್ನಾಟಕ ವಾರ್ತೆ): ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ 1ರ ಶಾಖೆ 5ರಲ್ಲಿ ಜಂಗಲ್ ಕಟಿಂಗ್ ಕಾಮಗಾರಿ ನಿರ್ವಹಿಸುತ್ತಿರುವ ಪ್ರಯುಕ್ತ ಏಪ್ರಿಲ್ 6ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ನಗರದ ಜಿ.ಡಿ. ತೋಟ, ಜಹಿರಾಬಾದ್, ಬಿ.ಆರ್.ಬಿ. ಸರ್ಕಲ್, ಮಂಗಲವಾರ್ ಪೇಟೆ, ಗೀತಾ ಮಂದಿರ್ ರೋಡ್, ಪಟೇಲ್ ರೋಡ್, ಬ್ರೇಸ್ತ್ ವಾರಪೇಟೆ, ಪದ್ಮಾನಾಭ ಟಾಕೀಸ್, ನೇತಾಜಿ ನಗರ, ಮೋಚಿವಾಡ, ಶೆಟ್ಟಿಬೌಳಿ ಸರ್ಕಲ್, ಬಂಗಾರ್ಬಜರ್, ಉಪ್ಪಾರ್ವಾಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08532-226386, 08532-231999, 9480845955 ಅಥವಾ 9448395621ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ 1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *