ಬಳಗಾನೂರು, ಏ,4:-ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯವಾಗಿ ಕಡತಗಳು ಮಾತ್ರ ಮಾತಾಡುತ್ತವೆ,ಆದರೆ ಇಲ್ಲಿ ಮನಸ್ಸುಗಳು ಮಾತಾಡಿದವು.
ಬಳಗಾನೂರಿನ ಪಟ್ಟಣ ಪಂಚಾಯ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಿರಿಯ ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ರಾಮ್ ನರೇಶ ಯಾದವ್ ಅವರು ಈಗ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಪದೋನ್ನತಿ ಹೊಂದಿ ಮಾನವಿ ಪಟ್ಟಣಕ್ಕೆ ವರ್ಗಾವಣೆಗೊಂಡಿದ್ದಾರೆ.ಈ ವರ್ಗಾವಣೆ ಒಂದು ಸಾಮಾನ್ಯ ಆಡಳಿತಕ್ರ ಮವಾಗಿರಬಹುದಿತ್ತು.ಆದರೆ ಇಲ್ಲಿ ಅದು ಭಾವನೆಗಳಪ್ರವಾಹವಾಯಿತು.ಪೌರಕಾರ್ಮಿಕರು,ಸಮುದಾಯ ಸಂಚಾಲಕರು,ಯಾದವ್ ಅವರಿಗೆ ಬೆಳ್ಳಿಯ ಕಡಗ ನೀಡಿ ಗೌರವಿಸಲಾಯಿತು.ಆದರೆ ಆ ಕಡಗಕ್ಕಿಂತ ಬೆಲೆಬಾಳಿದ್ದು ಅವರ ಮೇಲೆ ಕಾರ್ಮಿಕರ ಪ್ರೀತಿ.ಕೆಲವರು ಗದ್ಗದಿತರಾದರು,ಕೆಲವರಿಂದ ಕಣ್ಣೀರನ್ನು ಅಡಗಿಸಲಾಗಲಿಲ್ಲ,ಹಲವರು ಅಳುತ್ತಲೇ ಅವರನ್ನು
ಬೀಳ್ಕೊಟ್ಟರು.ಪದೋನ್ನತಿಯ ಸಂತೋಷ ಒಂದೆಡೆ ಇದ್ದರೆ,ನಮ್ಮವರನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ನೋವು ಮತ್ತೊಂದೆಡೆ.ಈ ಕ್ಷಣವು ಒಂದೇ ಸಂದೇಶ ನೀಡಿತು. ಅಧಿಕಾರದಲ್ಲಿ ಮಾನವೀಯತೆ ಇದ್ದರೆ,ಸಂಬಂಧಗಳು ಕೇವಲ ಕಚೇರಿಯಲ್ಲೇ ಅಲ್ಲ,ಹೃದಯದಲ್ಲೂ ಕಟ್ಟಿಕೊಳ್ಳುತ್ತವೆ.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಶಿವಕುಮಾರ ನಾಯಕ, ಮುಖ್ಯಾಧಿಕಾರಿ ಹಾಗೂಸಿ ಬ್ಬಂಧಿವರ್ಗದವರು ಉಪಸ್ಥಿತರಿದ್ದರು.
ಇಂದಿನ ಯುಗದಲ್ಲಿ ವೇದಿಕೆಯ ಮೇಲೆ ಗೌರವ ನೀಡಿ ನಂತರ ಅವಮಾನಿಸುವವರ ನಡುವೆ,ರಾಮ್ ನರೇಶ ಯಾದವ್ ಅವರು ಮನುಷ್ಯತ್ವದ ಮಾದರಿ ಯಾಗಿ ಹೊರಹೊಮ್ಮಿದ್ದಾರೆ.
ವರದಿ: ಸುರೇಶ ಬಳಗಾನೂರು

