ಅರಕೇರಾ:
ಸೈನಿಕ ಅಕಾಡೆಮಿ ದೇವದುರ್ಗದಿಂದ ಅಗ್ನಿವೀರ, ಆರ್ಮಿ, ಪೋಲೀಸ್ ಹಾಗೂ ಪಿ.ಎಸ್.ಐ. ಹುದ್ದೆಗೆ ನೇಮಕ ಬಯಸುವ ಯುವಕರಿಗೆ ಉಚಿತ ತರಬೇತಿ ನೀಡುವ ಶಿಬಿರವನ್ನು ಆಯೋಜಿಸಲಾಗುತ್ತಿದೆ ಎಂದು ಸೈನಿಕ ಅಕಾಡೆಮಿಯ ಅಧ್ಯಕ್ಷ ಭಾನು ಪ್ರಕಾಶ ಖೇಣೇದ್ ತಿಳಿಸಿದರು. ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೈನಿಕ ಅಕಾಡೆಮಿಯಿಂದ ದೇವದುರ್ಗದಲ್ಲಿ ಕಳೆದ 6 ವರ್ಷಗಳಿಂದ ಉಚಿತ ತರಬೇತಿ ನೀಡುತ್ತಿದ್ದು, ಸುಮಾರು 20 ಯುವಕರು ಸೈನಿಕರಾಗಿ ಆಯ್ಕೆಗೊಂಡಿದ್ದಾರೆ. ಸೈನಿಕರಾಗಲು ಬಯಸುವ ಯುವಕರಿಗೆ ಸರಕಾರಿ ಬಾಲಕಿಯರ ಪ್ರೌಢ ಶಾಲಾ ಆವರಣದಲ್ಲಿ ( ಬಸ್ ನಿಲ್ದಾಣದ ಹತ್ತಿರ) ಏ.5 ರಂದು ದೈಹಿಕ ಮತ್ತು ಪ್ರವೇಶ (ಸಿ.ಇ.ಟಿ) ಪರೀಕ್ಷೆಗಳನ್ನು ನಡೆಸಿ ತರಬೇತಿಗೆ ಆಯ್ಕೆ ಮಾಡಲಾಗುವುದು ಎಂದು ಸೈನಿಕ ಅಕಾಡೆಮಿಯ ಅಧ್ಯಕ್ಷ ಭಾನುಪ್ರಕಾಶ ಖೇಣೇದ್ ತಿಳಿಸಿದರು.
ಈ ಸಂದರ್ಭದಲ್ಲಿ ತರಬೇತಿದಾರ ಪಂಪಣ್ಣ ಅಕ್ಕರಕಿ, ಮಾರ್ಗದರ್ಶಕ ಡಾ.ಸುಭಾಷ್‌ಚಂದ್ರ ಪಾಟೀಲ್ ಇದ್ದರು.

