ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾ.ಅಧ್ಯಕ್ಷರಾದ ಅರುಣಕುಮಾರ ಚಂದಾ ಮಾತನಾಡಿ ಏ.5 ರಂದು ಬೆಳಿಗ್ಗೆ 11 ಕ್ಕೆ ಪಟ್ಟಣದ ಸಿದ್ದರ್ಥ ಕಾಲೇಜಿನಲ್ಲಿ ನಡೆಯುವ ಬೇಸಿಗೆ ತರಬೇತಿ ಶಿಬಿರಕ್ಕೆ ಸಚಿವ ಎನ್.ಎಸ್.ಬೋಸರಾಜು ರವರು ಚಾಲನೆ ನೀಡಲಿದ್ದಾರೆ. ಏ.7 ರಂದು ಬೆಳಿಗ್ಗೆ ಮಾನ್ವಿ ಪಟ್ಟಣಕ್ಕೆ ಆಗಮಿಸುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ರಾಜ್ಯಾಧ್ಯಕ್ಷರಾದ ಶಂಕರ ಬಿದರಿ ನಿವೃತ್ತ ಐ.ಜಿ.ಪಿ. ರವರನ್ನು ಸಮಾಜದಿಂದ ಭವ್ಯವಾಗಿ ಸ್ವಾಗತಿಸಲಾಗುವುದು ಶಂಕರ ಬಿದರಿರವರು ಮಾನ್ವಿ ಪಟ್ಟಣದಲ್ಲಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಕಚೇರಿಗೆ ಭೇಟಿ ನೀಡಿ ಸದಸ್ಯರೊಂದಿಗೆ ಹಾಗೂ ಸಮಾಜದ ಗಣ್ಯರೊಂದಿಗೆ ಚರ್ಚೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ 2 ಕ್ಕೆ ಹಿರಿಯ ವಕೀಲರಾದ ಸಿದ್ದಲಿಂಗಪ್ಪ ರವರ ನಿವಾಸದಲ್ಲಿ ಸಮಾಜದವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಸಂಜೆ 5ಕ್ಕೆ ತಾಲೂಕಿನ ಅಡವಿ ಅಮರೇಶ್ವರ ಗ್ರಾಮದಲ್ಲಿನ ಸುವರ್ಣಗಿರಿ ವಿರಕ್ತಮಠ ಶ್ರೀ ಅಡವಿ ಅಮರೇಶ್ವರ ಮಠದಲ್ಲಿ 72 ನೇ ಜಾತ್ರ ಮಹೋತ್ಸವದ ಅಂಗವಾಗಿ ನಡೆಯುವ ಸುವರ್ಣಗಿರಿ ವಿರಕ್ತಮಠ ಒಳಬಳ್ಳಾರಿಯ ಶ್ರೀ ಡಾ.ಸಿದ್ದಲಿಂಗ ಮಹಾಸ್ವಾಮಿಗಳ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುವರ್ಣಗಿರಿ ವಿರಕ್ತಮಠ ಶ್ರೀ ಅಡವಿ ಅಮರೇಶ್ವರ ಮಠದ ಶ್ರೀ ತೊಂಟದಾರ್ಯ ಮಹಾಸ್ವಾಮಿಗಳಿಂದ ಮಹಾರಥೋತ್ಸವಕ್ಕೆ ಚಾಲನೆ ಹಾಗೂ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಜೀವನದರ್ಶನ ಪ್ರವಚನ ಮಹಾಮಂಗಲ ಕಾರ್ಯಕ್ರಮ , ಜಾನುವಾರುಗಳ ಜಾತ್ರೆ ಅಂಗವಾಗಿ ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿದೆ ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಶ್ರೀಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯಕರಿಣಿ ಸದಸ್ಯರಾದ ಸಿದ್ದಲಿಂಗಪ್ಪ ವಕೀಲರು, ತಾಲೂಕು ವೀರಶೈವಲಿಂಗಾಯತ ಸಮಾಜದ ಅಧ್ಯಕ್ಷರಾದ ಹರಿಹರಪಾಟೀಲ್, ಗೌ.ಅಧ್ಯಕ್ಷರಾದ ಶ್ರೀಧರಸ್ವಾಮಿ,ತಿಮ್ಮರೆಡ್ಡಿ ಭೋಗವತಿ, ಜಗದೀಶ ಓತ್ತೂರು,ಗುರುಸಿದ್ದಪ್ಪ ಕಣ್ಣೂರು, ವೀರನಗೌಡ ವಕೀಲರು,ಮಲ್ಲನಗೌಡ ನಕ್ಕುಂದಿ ವಕೀಲರು.ಶಂಕರಪ್ಪ ಸೇರಿದಂತೆ ಸಮಾಜದ ಮುಖಂಡರು ಇದ್ದರು.
ಮಾನ್ವಿ: ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾ.ಅಧ್ಯಕ್ಷರಾದ ಅರುಣಕುಮಾರ ಚಂದಾ ಮಾತನಾಡಿದರು.

