ತಾಳಿಕೋಟಿ: ತಾಲೂಕ ಆಡಳಿತದ ವತಿಯಿಂದ ಏಪ್ರಿಲ್ 14ರಂದು ಪಟ್ಟಣದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಆಚರಿಸಲಿದ್ದು ಅದರ ಪೂರ್ವಭಾವಿ ಸಭೆಯನ್ನು ಏಪ್ರಿಲ್ 7 ರಂದು ಸಂಜೆ 4 ಗಂಟೆಗೆ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರು ವಹಿಸಲಿದ್ದು ಸದರಿ ಸಭೆಯಲ್ಲಿ ಜಯಂತಿ ಯಶಸ್ವಿಯ ಸಿದ್ಧತೆಗಳ ಕುರಿತು ಚರ್ಚಿಸಲಾಗುವುದು. ಕಾರಣ ಪಟ್ಟಣದ ಗಣ್ಯರು, ಅಂಬೇಡ್ಕರ ಸಮಾಜದ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ತಾಲೂಕ ಆಡಳಿತದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *