ಮಸ್ಕಿ: ಎರಡನೇ ತಿಂತಣಿ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದ ಪಟ್ಟಣದ ಮೌನೇಶ್ವರರ ಜೋಡು ಪಲ್ಲಕ್ಕಿ ಮೆರವಣಿಗೆ ಗುರುವಾರ ಪ್ರ‌ಮುಖ ಬೀದಿಗಳಲ್ಲಿ ವೈಭವದಿಂದ ನಡೆಯಿತು.

ಬೆಳಿಗ್ಗೆ ಮುದಗಲ್ ರಸ್ತೆಯಲ್ಲಿನ ಶ್ರೀ ಜಗದ್ಗುರು ಮೌನೇಶ್ವರರ ದೇವಸ್ಥಾನದಲ್ಲಿ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ನಡೆದವು.

ನಂತರ ದೇವಸ್ಥಾನದಿಂದ ಜೋಡು ಪಲ್ಲಕ್ಕಿ ಮೆರವಣಿಗೆ ಆರಂಭವಾಯಿತು. ಅಶೋಕ ವೃತ್ತ, ಮುಖ್ಯ ಬಜಾರ ಸಂಜೆ ಬಜಾರ ಮೂಲಕ ಸಾಗಿ ರಾತ್ರಿ ಪುನಃ ಮೌನೇಶ್ವರರ ದೇವಸ್ಥಾನಕ್ಕೆ ಆಗಮಿಸಿತು. ಜಯಘೋಷಗಳ ನಡುವೆ ಗುಹೆ ಪ್ರವೇಶ ಕಾರ್ಯಕ್ರಮ ನಡೆಯಿತು.

ಪುರವಂತರ ಸೇವೆ, ನಂದಿಕೋಲ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣೆಗೆ ಮೆರಗು ನೀಡಿದವು.

ಮಹಿಳೆಯರು ಕುಂಭ ಹಾಗೂ ಕಳಸದೊಂದಿಗೆ ಪಾಲ್ಗೊಂಡಿದ್ದರು. ಮೌನೇಶ್ವರರ ದೇವಸ್ಥಾನದ ಧರ್ಮಾಧಿಕಾರಿ ಮೌನೇಶ ತಾತ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು, ಸ್ಥಳೀಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *