‌ ‌ ಸದ್ಗುರು ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಸಕಲ ಸಿದ್ದತೆ ‌ ‌ ‌ ‌ ‌ ‌ ‌ ‌ ಸುಗೂರ ಶ್ರೀ ಮಠಕ್ಕೆ ತಹಶಿಲ್ದಾರರ ಭೇಟಿ ‌ ‌ ‌ *ಚಿತ್ತಾಪುರ:- ತಾಲೂಕು ಸುಗೂರ ಎನ್ ಗ್ರಾಮದ ಪವಾಡ ಪುರುಷ ಸಚ್ಚಿದಾನಂದ ನಿತ್ಯ ನಿರಂಜನ ಮೂರ್ತಿ , ಸ್ವಯಂ ಸಿದ್ಧ ಶರಣ ಶ್ರೀ ಭೋಜಲಿಂಗೇಶ್ವರ ವಿನೂತನವಾಗಿ ನಿರ್ಮಾಣಗೊಂಡ ದೇವಸ್ಥಾನದ ಕಟ್ಟಡ ಲೋಕಾರ್ಪಣೆ ಮತ್ತು ವಿನೂತನ ಕಲ್ಯಾಣ ಮಂಟಪ ಮತ್ತು ಬೆಳ್ಳಿ ರಥೋತ್ಸವ (ಉದ್ಘಾಟನಾ) ಸಮಾರಂಭ ಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ರಾಮಯ್ಯನವರು ಇದೇ ಏಪ್ರಿಲ್ ೧೧ ರಂದು ಶ್ರೀಮಠಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಸಿದ್ಧತೆಗಳ ಕುರಿತು ಮಾನ್ಯ ತಹಶೀಲ್ದಾರರು ಶ್ರೀ ನಾಗಯ್ಯ ಹಿರೇಮಠ ಸ್ವಾಮಿಗಳು ಇಂದು ಶ್ರೀ ಭೋಜಲಿಂಗೇಶ್ವರ ಮಠದ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಜೊತೆಗೆ ಸಂಭಾಷಣೆ ನಡೆಸಿ. ಸ್ಥಳ ಪರಿಶೀಲನೆ ನಡೆಸಿದರು.
ಈ ಭೇಟಿಯ ಪ್ರಮುಖ ಅಂಶಗಳು ಇಲ್ಲಿವೆ:
ಸ್ಥಳ ಪರಿಶೀಲನೆ: ಮುಂಬರುವ ಏಪ್ರಿಲ್ ೧೧ ರಂದು ಸಿ.ಎಮ್ ಅವರ ಅಧಿಕೃತ ಭೇಟಿಯ ಹಿನ್ನೆಲೆಯಲ್ಲಿ, ತಹಶೀಲ್ದಾರರು ಶ್ರೀಮಠದ ಆವರಣದಲ್ಲಿ ಭದ್ರತೆ, ವಾಹನ ನಿಲುಗಡೆ ಮತ್ತು ಕಾರ್ಯಕ್ರಮದ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಅಧಿಕಾರಿಗಳಿಗೆ ಸೂಚನೆ: ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಮತ್ತು ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ತಹಶೀಲ್ದಾರರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ವ್ಯವಸ್ಥೆಗಳ ಅವಲೋಕನ: ವೇದಿಕೆ ಸಿದ್ಧತೆ, ಅನೇಕ ರಾಜಕೀಯ ಗಣ್ಯರು.ಮತ್ತು ಈ ನಾಡಿನ ಅನೇಕ ಮಠಾಧೀಶರು ಆಗಮನದ ದಾರಿ ಮತ್ತು ಮಠದ ಆಡಳಿತ ಮಂಡಳಿಯೊಂದಿಗೆ ಸಮನ್ವಯದ ಕುರಿತು ಸಮಾಲೋಚನೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿ ಹಜರತ್ (ತಲಾಟಿ) ಗ್ರಾಮ ಲೆಕ್ಕಾದಿಕಾರಿ ಮತ್ತು ರಾಮಲಿಂಗಯ್ಯ ಸ್ವಾಮಿ. ಮಹೇಶ್ ಪಾಟೀಲ ಸುಗೂರ ಎನ್, ಶರಣಗೌಡ ಬೆನಕನಹಳ್ಳಿ. ಭೀಮರೆಡ್ಡಿ ಗೌಡ ಕುರಾಳ. ವಿಶ್ವನಾಥ ರೆಡ್ಡಿ ಪಾಟೀಲ ಸುಗೂರ ಎನ್. ಸಂಗಾರೆಡ್ಡಿ ಗೌಡ ಮಾಲಿ ಪಾಟೀಲ , ಶರಣಗೌಡ ವಕೀಲರು, ಈರಣ್ಣ ಬಲಕಲ್ ಎಲ್ ಐ.ಸಿ. ಮಹಿಪಾಲ್ ರೆಡ್ಡಿ ಕರಣಗಿ. ಸಿದ್ರಾಮರೆಡ್ಡಿಗೌಡ ಬೆನಕನಹಳ್ಳಿ, ಮಲ್ಲಿಕಾರ್ಜುನ ಕಾರ್ಪೆಟರ್ ಯಾದಗಿರ. ಸುರೇಶ್ ಕೊಟಿಮನಿ ಯಾದಗಿರ, ಮಲ್ಲಪ್ಪ ಅರಿಕೇರಿ ಮಾಸ್ತರ. ಶಂಕರಗೌಡ ಮಾಸ್ತರ ಲಿಂಗಸುಗೂರ. ಡಾ.ಸುರೇಶ್ ಮಾಘನೂರ.ಮಹಾದೇವಪ್ಪ ಸಾಹುಕಾರ್ ಕುರಕುಂದಿ. ಬಸ್ಸುಗೌಡ ಮಾಲಿ ಪಾಟೀಲ್. ಸಿದ್ದುಗೌಡ ಕುರಾಳ,ಬಾಬು ಪಾಟೀಲ. ಬಸವರಾಜ ಹಡಪದ ಸುಗೂರ ಎನ್, ರಾಜೇಂದ್ರ ನಾಯ್ಕೊಡಿ,ಪ್ರಭು ಹೂಗಾರ. ಸಿದ್ದು ಸಾಹುಕಾರ್ ಕುಂಬಾರ.ಯಮನಪ್ಪ ತಳವಾರ. ಸಾಬ್ಬಣ್ಣ ಬೇನಿಗಿಡ , ಸೋಮು ಮಂಡ್ನಾಳ ಸೇರಿದಂತೆ ಸುಗೂರ ಎನ್ ಗ್ರಾಮಸ್ಥರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು ಎಂದು ಶ್ರೀಮಠದ ಸಂದ್ಬಕ್ತರಾದ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಈ ಪತ್ರಿಕೆಯಲ್ಲಿ ತಿಳಿಸಿದರು.

Leave a Reply

Your email address will not be published. Required fields are marked *