ತಾಳಿಕೋಟೆ: ಪಟ್ಟಣದಲ್ಲಿ ಜೈನ ಸಮುದಾಯದ ವತಿಯಿಂದ ಭಗವಾನ ಮಹಾವೀರರ ಜಯಂತ್ಯುತ್ಸವವನ್ನು ಭಕ್ತಿ, ಶ್ರದ್ಧೆ, ಸಂಭ್ರಮಗಳಿಂದ ಸೋಮವಾರ ನೆರವೇರಿಸಲಾಯಿತು.
ಜಯಂತ್ಯುತ್ಸವ ದ ಪ್ರಯುಕ್ತ ಬೆಳಿಗ್ಗೆ ಮೂಲ ತೀರ್ಥಂಕರ ಭಗವಾನ ಆದಿನಾಥನ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ನಂತರ ಬೀಮನ ಭಾವಿಯಲ್ಲಿ ಗಂಗಸ್ಥಳ ಮುಗಿಸಿಕೊಂಡು ವಾದ್ಯ ವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀ ಪಲ್ಲಕ್ಕಿ ಉತ್ಸವ, ಕಳಸ ಹಾಗೂ ಶೋಭಾ ಯಾತ್ರೆ ಜರುಗಿತು.
ದೇವಸ್ಥಾನಕ್ಕೆ ಮರಳಿದ ನಂತರ ಭಗವಾನ ತೋರ್ಥಂಕರ ಮಹಾವೀರನ ಭವ್ಯ ಮೂರ್ತಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ತೊಟ್ಟಿಲು, ನಾಮಕರಣ,, ಮಹಾಮಂಗಳಾರಾತಿ ನಂತರ ಪ್ರಸಾದ ವಿತರಣೆ ಮಾಡಲಾಯಿತು.
ಉತ್ಸವದಲ್ಲಿ ಸಮಾಜದ ಪ್ರಮುಖರಾದ ವಜ್ರಕುಮಾರ ಪ್ರಥಮಶೆಟ್ಟಿ, ಎಸ್.ಬಿ.ಸುರಪುರ, ಗಂಗಣ್ಣ ಸುರಪುರ, ಎಸ್.ಆರ್.ಹುಬ್ಬಳ್ಳಿ, ಶ್ರೀಪಾಳ ಸಂಗ್ಮಿ, ವಿ.ಎನ್.ಯಾತಗಿರಿ, ಗುಂಡುರಾವ್ ಧನಪಾಲ. ಪ್ರಕಾಶ ಸುರಪುರ, ಸುರೇಶ ದೇವೂರ, ರತ್ನಪ್ಪ ಪ್ರಥಮಶೆಟ್ಟಿ,ನೇಮಿನಾಥ ಧನಪಾಲ, ಪದ್ಮಾವತಿ ಮಹಿಳಾ ಮಂಡಳಿಯ ಸದಸ್ಯರು ಸೆರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *