ಲಿಂಗಸಗೂರು : ಮಾ 30 -ಸರಸ್ವತಿ ( ಮೃತ ಮಹಿಳೆ ) ಯ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬಂದು ಮಹಿಳೆಯ ಮೇಲೆ ಎರಗಿ ಅತ್ಯಾಚಾರ ವೆಸಗಿದ ಘಟನೆ ಮಿಂಚೇರಿ ತಾಂಡ – 2 ರಲ್ಲಿ ಘಟನೆ ನಡೆದಿದೆ
ಸರಸ್ವತಿ ಗಂಡ ಮುತ್ತು ಚೌಹಣ್ ವಯಸ್ಸು 21 ವರ್ಷ ಈಕೆ ಅತ್ಯಾಚಾರಕ್ಕೆ ಒಳಗಾಗಿ ಮರಿಯಾದೆಗೆ ಹೆದರಿ ನೇಣಿಗೆ ಶರಣಾದ ಮಹಿಳೆ ಈಕೆ ಒಂದು ತಿಂಗಳ ಹಿಂದೆ ಗಂಡನ ಮನೆಯಿಂದ ತನ್ನ ತವರು ಮನೆಗೆ ಬಂದಿದ್ದು ದಿನಾಂಕ 26-3-26 ರ ಮದ್ಯಾಹ್ನ
ಇತ್ತ ಮಹಿಳೆಯ ಮನೆಯವರೆಲ್ಲರೂ ತನ್ನ ಸಣ್ಣ ಮಗಳನ್ನು ಗಂಡನ ಮನೆಗೆ ಬಿಟ್ಟು ಬರಲು ಹೋಗಿದ್ದರು ಇದನ್ನು ತಿಳಿದ ಆರೋಪಿ ರಾಹುಲ್ ತಂದೆ ಅಮರೇಶ್ ವಯಸ್ಸು -22 ವರ್ಷ ಮಹಿಳೆಯ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ
ಮನೆಗೆ ನುಗ್ಗಿ ಮಹಿಳೆ ಮೇಲೆ ಎರಗಿ ಅತ್ಯಾಚಾರ ಮಾಡಿದ್ದಾನೆ ನಂತರ ಸಂಜೆ ಊರಿಂದ ಬಂದ ಮಹಿಳೆಯ ಮನೆಯವರು ಮಹಿಳೆ ಚಿರಾಡುತಿದ್ದದ್ದನ್ನು ಕಂಡು ಮನೆಯವರು ಕೇಳಿದಾಗ ರಾಹುಲ್ ಎಂಬಾತನು ಬಂದು ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆಂದು ಮನೆಯವರಿಗೆ ನಡೆದ ವಿಷಯ ತಿಳಿಸಿದಳು , ಇದನ್ನು ಅರಿತ ಆರೋಪಿಯ ಕಡೆಯವರು ಅಕ್ರಮ ಕೂಟ ಕಟ್ಟಿಕೊಂಡು ಮೃತ ಮಹಿಳೆಯ ಮನೆಯವರ ಮೇಲೆ ಎರಗಿ ಚನ್ನಾಗಿ ಥಳಿಸಿದ್ದಾರೆಂದು ಗೋವಿಂದಪ್ಪ ತಂದೆ ರಾಮಪ್ಪ ರಾಠೋಡ್ ಕೊಟ್ಟ ದೂರಿನ ಅನ್ವಯ ಲಿಂಗಸಗೂರು ಪೊಲೀಸರು ಪ್ರಕರಣ ದಾಖಲಿಸಿ ಅತ್ಯಾಚಾರ ಮಾಡಿದ ಆರೋಪಿಯನ್ನು ಬಂಧಿಸಿ ಇನ್ನುಳಿದ ಆರೋಪಿಗಳ ಬಂದನಕ್ಕೆ ಪೊಲೀಸರು ಬಲೆ ಬಿಸಿದ್ದಾರೆಂದು ತಿಳಿದು ಬಂದಿದೆ .

