ಲಿಂಗಸಗೂರು : ಮಾ 30 -ಮಹಿಳೆಯರನ್ನು ನೀರು ಸರಬರಾಜು ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸುವ ಉದ್ದೇಶದಿಂದ ‘ನಲ್ ಜಲ್ ಮಿತ್ರ’ ಕಾರ್ಯಕ್ರಮದಡಿ 49 ಮಂದಿ ಮಹಿಳೆಯರಿಗೆ ಬಹು ಕೌಶಲ್ಯ ತರಬೇತಿ ನೀಡಲಾಗಿದೆ ಎಂದು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಪಂಪನಗೌಡ ಪಾಟೀಲ್ ತಿಳಿಸಿದ್ದಾರೆ.

ಅವರಿಂದು ಪುರಸಭೆ ವ್ಯಾಪ್ತಿಯ ಕಸಬಾ ಲಿಂಗಸಗೂರು ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು
ಪ್ರತಿ ಗ್ರಾಮ ಪಂಚಾಯಿತಿಯಿಂದ ಇಬ್ಬರು ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಿ, 15ನೇ ಹಣಕಾಸು ಆಯೋಗ ಹಾಗೂ ಇತರೆ ಅನುದಾನಗಳ ಮೂಲಕ ಈ ತರಬೇತಿಯನ್ನು ನೀಡಲಾಗಿದೆ ಹಾಗೂ ಲಿಂಗಸಗೂರು ಮತ್ತು ಮಸ್ಕಿ ತಾಲೂಕಿನ ಮೊದಲ ಬ್ಯಾಚ್‌ಗಳಲ್ಲಿ ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿಸಿದರು. ಏಪ್ರಿಲ್ 1ರಿಂದ 23 ದಿನಗಳ ಕಾಲ ಗ್ರಾಮ ಪಂಚಾಯಿತಿಗಳಲ್ಲೇ 49 ಅಭ್ಯರ್ಥಿಗಳಿಗೆ ದ್ವಿತೀಯ ಹಂತದ ‘ಆನ್ ಜಾಬ್ ಟ್ರೈನಿಂಗ್ ಆರಂಭವಾಗಲಿದೆ. ಪೈಪ್‌ಗಳ ಮೂಲಕ ನೀರು ಸರಬರಾಜಿನ ನಿರಂತರ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಗ್ರಾಮ ಪಂಚಾಯಿತಿಗಳೇ ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯಗತಗೊಳಿಸುವಂತೆ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ನಂತರ ಜಿಲ್ಲಾ ಸಹಾಯಕ ನಿರ್ದೇಶಕ ರಾಜಶೇಖರ ಪಾಟೀಲ್ ಮಾತನಾಡಿ, ಈ ತರಬೇತಿಯಿಂದ ಮಹಿಳೆಯರು ತಮ್ಮ ಗ್ರಾಮಗಳಲ್ಲಿ ಕೊಳವೆ ನೀರು ಸರಬರಾಜು ಯೋಜನೆಗಳ ಸಣ್ಣಪುಟ್ಟ ದುರಸ್ತಿ ಮತ್ತು ನಿರ್ವಹಣೆ ಕಾರ್ಯಗಳನ್ನು ಸ್ವತಃ ನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರ ಜೊತೆಗೆ, ನೀರು ಸರಬರಾಜು ವ್ಯವಸ್ಥೆಯ ದಕ್ಷತೆ ಹೆಚ್ಚಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯ ಮಹಾದೇವ ಕೆ. ಸರ್ಜಾಪೂರು, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಎ. ನಾಗರಾಜ, ಹಿರಿಯ ತರಬೇತಿ ಸಂಪನ್ಮೂಲ ವ್ಯಕ್ತಿಗಳು,
ಅಧಿಕ್ಷಕಿ ತಾರಾಬಾಯಿ, ಎನ.ಆರ.ಎಲ.ಎಂ ಬಸವರಾಜ ಕಟ್ಟಿಮನಿ, ಮಲ್ಲಪ್ಪ , ಸೈಯದ್, ಮಂಜುನಾಥ, ಐಶ್ವರ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *