ಜಾಲಹಳ್ಳಿ : ಗ್ರಾಮದಲ್ಲಿ ಎ 02 ಗುರುವಾರ ದಂದು ಭಕ್ತಿಭಾವದಿಂದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಲಿದೆ.
ಇಂದು ದಿನಾಂಕ 28-03-2026ರಂದು ರಂಗನಾಥ ದೇವಸ್ಥಾನದಲ್ಲಿ ಪೂಜಾರಿಗಳು ವರದಿಗಾರರ ಜೊತೆ ಮಾತನಾಡುತ್ತಾ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಈ ಮಹೋತ್ಸವ ಜರುಗಲಿದ್ದು, ಯುಗಾದಿಯಿಂದಲೇ ಕಾರ್ಯಕ್ರಮಗಳು ಆರಂಭವಾಗಿ ಪೂರ್ಣಿಮೆಯ ಚಿತ್ತ ನಕ್ಷತ್ರದಂದು ರಥೋತ್ಸವವು ನೆರವೇರುತ್ತದೆ.
ಮಾಲಾಧಾರಿಗಳ ಪ್ರವಚನಕ್ಕಾಗಿ ಆಗಮಿಸುವ ವರದಾಚಾರ್ಯರು ಮಾತನಾಡಿ, ಜಾಲಹಳ್ಳಿಯ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಇತಿಹಾಸವು 15ನೇ ಶತಮಾನಕ್ಕೆ ಸೇರಿದದ್ದು ಎಂದು ತಿಳಿಸಿದರು. ಮುದುಗಲ್ಲಿನಿಂದ ಉಪ್ಪಿನ ಚೀಲದಲ್ಲಿ ದೇವರು ಬಂದು ಇಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಕಳೆದ 8–10 ವರ್ಷಗಳಿಂದ ಗೋವಿಂದ ಮಾಲಾದಾರಿಗಳ ಸಂಖ್ಯೆ ಸುಮಾರು 500ಕ್ಕೂ ಹೆಚ್ಚಾಗಿದೆ ಎಂದು ಅವರು ಹೇಳಿದರು.
ರಥೋತ್ಸವದ ಸಂದರ್ಭದಲ್ಲಿ ಪ್ರತಿದಿನ ವಿಭಿನ್ನ ವಾಹನ ಸೇವೆಗಳು ನಡೆಯುತ್ತವೆ. ಪೂರ್ಣಿಮೆಯ ಚಿತ್ತ ನಕ್ಷತ್ರದಂದು ರಥೋತ್ಸವ ನಡೆಯುವ ವೇಳೆ ಸಂಜೀವರಾಯನ ಸನ್ನಿಧಿಯಲ್ಲಿ ಬೇವಿನ ಗಿಡ ಸಿಹಿಯಾಗುತ್ತದೆ ಎಂಬ ಪ್ರತೀಕವನ್ನು ಭಕ್ತರು ನಂಬುತ್ತಾರೆ.
ಶ್ರೀ ಲಕ್ಷ್ಮಿ ರಂಗನಾಥ ದೇವಸ್ಥಾನದ ದೇವಸ್ಥಾನದ ಪೂಜಾರಿ ಗಳಾದ ವೆಂಕೋಬ ಪೂಜಾರಿ ಮಾತನಾಡಿ, ಊರಿನ ಐದು ವತಂದಾರರು ( ಊರಿನ ದೊರೆಗಳು, ದೇಸಾಯಿ, ಕುಲಕರ್ಣಿ ಮನೆತನಗಳು ಮತ್ತು ದೈವದವರು) ಬಂದ ನಂತರ ಎಲ್ಲಾ ಕಾರ್ಯಕ್ರಮಗಳು ಆರಂಭವಾಗುತ್ತವೆ ಎಂದರು. ಭಕ್ತರು 9 ದಿನ ಕಾಲ ಚಪ್ಪಲಿ ಧರಿಸದೆ ವ್ರತ ಪಾಲಿಸುವ ಪದ್ಧತಿ ಇದೆ. ರಥೋತ್ಸವದ ಒಂದು ದಿನ ಮೊದಲು ಹಾಗೂ ರಥೋತ್ಸವದ ದಿನ ನೀರಿನ ಆಟ (ಜಲಕ್ರೀಡೆ) ನಡೆಯುವುದು ವಿಶೇಷ.
ಪ್ರತಿ ವರ್ಷ ಸಾವಿರಾರು ಭಕ್ತರು ವಿವಿಧ ರಾಜ್ಯಗಳು ಹಾಗೂ ಜಿಲ್ಲೆಗಳಿಂದ ಭಾಗವಹಿಸುತ್ತಿದ್ದು, ಈ ಉತ್ಸವವು ಜಾತಿಭೇದವಿಲ್ಲದೆ ಸರ್ವಜನರ ಸಂಗಮವಾಗಿರುತ್ತದೆ.
ಇದೇ ಸಂದರ್ಭದಲ್ಲಿ ಸುರೇಶ್ ಪೂಜಾರಿ ಮಾತನಾಡಿ
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ರಥೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ದೇವಸ್ಥಾನದ ಪೂಜಾರಿಗಳಾದ ಸುರೇಶ್ ಪೂಜಾರಿ, ಗಂಗಾಧರ್ ಪೂಜಾರಿ, ವೆಂಕೋಬ ಪೂಜಾರಿ ಹಾಗೂ ಶ್ರೀ ಲಕ್ಷ್ಮಿ ರಂಗನಾಥ ಗೋವಿಂದ ಸೇವಾ ಸಮಿತಿ ಅಧ್ಯಕ್ಷ ವೆಂಕೋಬ ತ್ಯಾಪ್ಲಿ, ರಂಗಪ್ಪ ಬಂಡಿ ಮತ್ತು ಅನೇಕ ಗೋವಿಂದ ಮಾಲಾದಾರಿ ಯುವಕರು ಉಪಸ್ಥಿತರಿದ್ದರು.
ರಥೋತ್ಸವ ಕಾರ್ಯಕ್ರಮಗಳ ವೇಳಾಪಟ್ಟಿ:
1. 29-03-2026 (ರವಿವಾರ) – ಏಕಾದಶಿ: ಹನುಮಂತನ ಸೇವೆ
2. 30-03-2026 (ಸೋಮವಾರ) – ದ್ವಾದಶಿ: ಕುದುರೆ ಸೇವೆ
3. 31-03-2026 (ಮಂಗಳವಾರ) – ತ್ರಯೋದಶಿ: ಗರುಡ ವಾಹನ ಸೇವೆ
4. 01-04-2026 (ಬುಧವಾರ) – ಚತುರ್ದಶಿ: ಆನೆ ಸೇವೆ
5. 02-04-2026 (ಗುರುವಾರ) – ಬ್ರಹ್ಮರಥೋತ್ಸವ
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಪೂಜಾರಿಗಳು ಮನವಿ ಮಾಡಿದ್ದಾರೆ.

