ತಾಳಿಕೋಟೆ: ಸಮೀಪದ ಕೊಡಗಾನೂರಿನ ಜೆ ಎಸ್ ಎಸ್ ಶಾಲೆಯು ನವೋದಯ ತರಬೇತಿ ನೀಡುವುದರಲ್ಲಿ ಜಿಲ್ಲೆಯಲ್ಲಿಯೇ ಪ್ರಖ್ಯಾತಿ ಪಡೆದಿದ್ದು ಈ ವರ್ಷ ಪರೀಕ್ಷೆ ಬರೆದ 28ವಿದ್ಯಾರ್ಥಿಗಳು 90%ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆಯನ್ನು ಮಾಡಿದ್ದಾರೆ. ವಿಜಯಪುರ ನವೋದಯ ಶಾಲೆಗೆ 5ವಿದ್ಯಾರ್ಥಿಗಳು ಮತ್ತು ಯಾದಗಿರಿ ನವೋದಯ ಶಾಲೆಗೆ 02ವಿದ್ಯಾರ್ಥಿಗಳು ಆಯ್ಕೆ ಆಗುವುದರ ಮೂಲಕ ಒಟ್ಟು ಈ ವರ್ಷ 07ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆ ಆಗಿರುತ್ತಾರೆ. ಅಭಿನಂದನೆ: ಪರೀಕ್ಷೆಯಲ್ಲಿ ಅಮೋಘ ಸಾಧನೆ ತೋರಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಜೆ ಎಸ್ ಎಸ್ ಶಾಲೆಯ ಕಾರ್ಯದರ್ಶಿಗಳಾದ ಸಾಹೇಬಗೌಡ ಗಬಸಾವಳಗಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಸಂಸ್ಥೆ ವತಿಯಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಏಪ್ರಿಲ್ 07ರಂದು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

