ತಾಳಿಕೋಟಿ:-ತಾಲೂಕಿನ ಬೆಕಿನಾಳ ಗ್ರಾಮದ ಶ್ರೀ ಪವಾಡ ಮಹಾಪುರುಷ ದೊಡ್ಡಪ್ಪ ಮುತ್ತ್ಯಾರವರ ಜಾತ್ರಾಮಹೋತ್ಸವದ ಮಾರ್ಚ್ 24 ಮಂಗಳವಾರದಂದು ಇಪ್ಪತ್ತೊಂದು ಪಲ್ಲಕ್ಕಿ ಮೆರವಣಿಗೆ ಉತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಜರಗಿತು ಮುಂಜಾನೆ 10 ಗಂಟೆಗೆ ಇಪ್ಪತ್ತೊಂದು ಪಲ್ಲಕ್ಕಿಗಳನ್ಮು ಗಂಗಸ್ಥಳ ಮಾಡಿಕೊಂಡು ಗ್ರಾಮದ ಪ್ರಮುಖ ಬೀದಿಯಲ್ಲಿ ಡೊಳ್ಳು ವಾಲಗದೊಂದಿಗೆ ಮೆರವಣಿಗೆಯ ಮುಖಾಂತರ ದೇವಸ್ಥಾನಕ್ಕೆ ಬರಮಾಡಿಕೊಂಡು ಪ್ರಕಾಶ್ ಮುತ್ತ್ಯಾರ್ ಮುಂಗಾರು – ಹಿಂಗಾರು ಮಳೆ ಬೆಳೆ ಸಮೃದ್ಧ ಬಗ್ಗೆ ನುಡಿಗಳು ಹೇಳಿದರು ಮಂಗಳವಾರದಂದು ಹಗಲು ಶ್ರೀ ಕರಿಸಿದ್ದೇಶ್ವರ್ ಕಲಾ ಸಂಘ ಬೇಕಿನಾಳ್ ಹಾಗೂ ಅಮೋಘಸಿದ್ದೇಶ್ವರ್ ಡೊಳ್ಳಿನ ಸಂಘ ಕೆಸರಟ್ಟಿ ಸುಪ್ರಸಿದ್ಧ ಜಿದ್ದಾಜಿದ್ದಿನ ಡೊಳ್ಳಿನ ಪದಗಳು ಜರಗಿದು ಅಂದೆ ರಾತ್ರಿ 10 ಗಂಟೆಗೆ ಶ್ರೀ ಗುಡ್ಡಾಪುರ ದಾನಮ್ಮ ದೇವಿಯ ಮಹಾತ್ಮೆ ಎಂಬ ಸುಂದರ ಪೌರಾಣಿಕ ನಾಟಕ ಜರಗಿತ್ತು ಹಾಗೂ ಆರು ಜೋಡಿ ಸಮೂವಿಕ ಮದುವೆ ಕಾರ್ಯಕ್ರಮ ಜರಗಿದು, ಕಕ್ಕೇರಾ ಡೊಳ್ಳು ಕುಣಿತ ಕಲಾ ತಂಡದವರು ಭಾಗವಹಿಸಿದರು ಶಿವಣ್ಣ ಪೂಜಾರ್ ಅಂಬಳನೂರ್ ಅಗ್ನಿ ಅಮಲಿಹಾಳ್ ಅಲಗೂರ್ ಬೂದಿಹಾಳ್ ಕಲಕೇರಿ ಅಲುವ್ ಗ್ರಾಮದ ಪೂಜಾರಿಗಳು ಹಾಗೂ ಗ್ರಾಮದ ಹಿರಿಯರಾದ ಶರಣಪ್ಪ ಪೂಜಾರ್ ಭೀಮಣ್ಣ ಪೂಜಾರ್ ಬಸವರಾಜ್ ಸತಲಗಾವಿ ಶಿವಪುತ್ರ ದೇವಸ್ಥಾನದ ಪಟ್ಟದ ಪೂಜಾರಿಯಾದ ಶ್ರೀ ಪ್ರಕಶಮುತ್ತ್ಯಾ ಅವರು ನೇತೃತ್ವ ವಹಿಸಿದರು

Leave a Reply

Your email address will not be published. Required fields are marked *